More

    ಸಕಾಲಕ್ಕೆ ಸಾಲ ಮರುಪಾವತಿಸಿ ಸಹಕರಿಸಿ

    ಅಥಣಿ: ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯ ದರೂರ ಶಾಖೆಯಿಂದ ಸಾಲವಾಗಿ ವಿತರಿಸಿದ 17 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಿದ ಬಸ್‌ನ್ನು ಶಾಲಾ ಆಡಳಿತ ಮಂಡಳಿಗೆ ಬುಧವಾರ ಹಸ್ತಾಂತರಿಸಲಾಯಿತು

    ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಿದಗೊಂಡ ಗುಮತಾಜ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಾಹನಗಳ ಖರೀದಿ ಜತೆಗೆ ಮಕ್ಕಳ ಯೋಗಕ್ಷೇಮ ಮತ್ತು ಸಕಾಲಕ್ಕೆ ಸೊಸೈಟಿ ಸಾಲ ಮರುಪಾವತಿಸುವ ನಿಟ್ಟಿನಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಹೊಸ ವಾಹನಗಳಿಗೆ ನುರಿತು ಚಾಲಕರನ್ನು ನೇಮಿಸಬೇಕು ಎಂದು ಸಲಹೆ ನೀಡಿದರು. ಸೊಸೈಟಿ ಪ್ರಧಾನ ವ್ಯವಸ್ಥಾಪಕ ಡಿ. ಎಸ್.ಕರೋಶಿ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೊಸೈಟಿಯು 2.60 ಕೋಟಿ ರೂ.ಠೇವು ಹೊಂದಿದ್ದು, 1 ಕೋಟಿ ರೂ. ಸಾಲ ವಿತರಿಸಿದೆ ಎಂದರು.

    ಶಿಕ್ಷಣ ಸಮಿತಿ ಅಧ್ಯಕ್ಷ ರಾಯಗೌಡ ಪಾಟೀಲ, ಸೊಸೈಟಿ ಸದಸ್ಯರಾದ ಬಸವರಾಜ ಮಠದ, ಶಿವಗೌಡ ಬಸಗೌಡರ, ಮಲ್ಲಪ್ಪ ಚೌಗಲಾ, ಬ್ರಹ್ಮಕುಮಾರ ಮದಬಾವಿ, ತಿಪ್ಪಣ್ಣ ಅಥಣಿ,ಪರಗೌಡ ಪಾಟೀಲ, ಮಹಾದೇವ ಜಾಬಗೌಡರ, ಪ್ರಕಾಶ ಪಾಟೀಲ, ರಮೇಶ ಪಾಟೀಲ, ಜಿನ್ನಪ್ಪ ಹೊಸೂರ, ಅಮಿತ ಗೌಡಪ್ಪನವರ ಹಾಗೂ ಪ್ರಧಾನ ವ್ಯವಸ್ಥಾಪಕ ಡಿ.ಎಸ್.ಕರೋಶಿ, ಶಾಖಾ ವ್ಯವಸ್ಥಾಪಕ ಎ.ಎಸ್.ಡೂಗನವರ, ಗುರುರಾಜ ಚೌಗಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts