More

    27ಕ್ಕೆ ರಾಜಧಾನಿಯಲ್ಲಿ ಓಲಾ-ಉಬರ್, ಆಟೋ, ಖಾಸಗಿ ಬಸ್​​ ಸಿಗುವುದಿಲ್ಲ!; ಕಾರಣವೇನು? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಶಕ್ತಿ ಯೋಜನೆಯ ವಿರುದ್ಧ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಕಾರಣ ಓಲಾ-ಉಬರ್​,ಆಟೋ, ಖಾಸಗಿ ಬಸ್​​ಗಳು ಸಂಚಾರ ಮಾಡುವುದಿಲ್ಲ.

    ಇದನ್ನೂ ಓದಿ: ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

    ಜುಲೈ 26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿ 12 ರವರೆಗೆ ಖಾಸಗಿ ವಾಹನಗಳ ಸಂಚಾರ ಇರುವುದಿಲ್ಲ. ರಾಜ್ಯ ಸರ್ಕಾರ ಮತ್ತು ಶಕ್ತಿ ಯೋಜನೆಯ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ನಿರ್ಧಾರ ಮಾಡಿದ್ದಾರೆ.

    27ಕ್ಕೆ ರಾಜಧಾನಿಯಲ್ಲಿ ಓಲಾ-ಉಬರ್, ಆಟೋ, ಖಾಸಗಿ ಬಸ್​​ ಸಿಗುವುದಿಲ್ಲ!; ಕಾರಣವೇನು? ಇಲ್ಲಿದೆ ಮಾಹಿತಿ

    “ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್​​ನಲ್ಲಿ ಉಚಿತ ಪ್ರಯಾಣ ಮತ್ತು ವೈಟ್​​ ಬೋರ್ಡ್ ಹೊಂದಿರುವ​​ ದ್ವಿಚಕ್ರ ವಾಹನಗಳು ಅಕ್ರಮವಾಗಿ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಕಾರಣದಿಂದ ಖಾಸಗಿ ವಾಹನ ಮಾಲೀಕರು ಸಾಕಷ್ಟು ನಷ್ಟವನ್ನು ನೋಡುತ್ತಿದ್ದಾರೆ. ಆಟೋ ಚಾಲಕರು ಮತ್ತು ಖಾಸಗಿ ಬಸ್​ ಮಾಲೀಕರ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಖಾಸಗಿ ಸಾರಿಗೆ ಒಕ್ಕೂಟಗಳ ಸಂಘ ಹೇಳಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಬಾರಿಗೆ ನಾಲ್ಕು ಹ್ಯಾಂಡ್ ಗ್ರೆನೇಡ್ ಪತ್ತೆ; ಪೊಲೀಸರಲ್ಲಿ ಹೆಚ್ಚಿದ ಆತಂಕ!

    “ಖಾಸಗಿ ಚಾಲಕರಿಗೆ ಇದರಿಂದ ತುಂಬಲಾರದ ನಷ್ಟ ಉಂಟಾಗುತ್ತಿದ್ದು, ಸಾಲ, ವಿಮೆ, ಮತ್ತು ಜೀವನ ಸಾಗಿಸಲು ಕ್ಲಿಷ್ಟ ಪರಿಸ್ಥಿತಿ ತಲುಪಿದ್ದಾರೆ. ಈ ಕಾರಣಗಳಿಂದ ರಾಜ್ಯದಲ್ಲಿ ಹಿಂದಿಗಿಂತಲೂ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ತಲೆದೋರುವ ಪರಿಸ್ಥಿತಿ ಉದ್ಭವವಾಗಲಿದೆ. ಸಾರಿಗೆ ಉದ್ದಿಮೆ 2020ರ ಕೋವಿಡ್ ನಂತರದಲ್ಲಿ ಹಂತ ಹಂತದಲ್ಲಿ ನೆಲಕಚ್ಚಿ ಹೋಗುತ್ತಿದ್ದು, ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಸುದೀರ್ಘ ಪತ್ರ ಬರೆದು ರವಾನಿಸಿದ್ದಾರೆ.

    VIDEO| ಲೋಕಾಯುಕ್ತ ಅಧಿಕಾರಿ ಹೆಸರು ಹೇಳಿಕೊಂಡು ಕಂದಾಯ ಅಧಿಕಾರಿಗೆ ವಂಚನೆ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts