More

    ಧರ್ಮಮಾರ್ಗದಲ್ಲಿ ಸಾಗಿದರೆ ಜೀವನ ಪಾವನ

    ಇಟಗಿ: ಪ್ರತಿಯೊಬ್ಬರೂ ಮಠ-ಮಾನ್ಯಗಳ ಮಾರ್ಗದರ್ಶನದಲ್ಲಿ ಧರ್ಮಮಾರ್ಗ ಅನುಸರಿಸಿದರೆ ಜೀವನ ಪಾವನಗೊಳ್ಳುತ್ತದೆ ಎಂದು ತುಮಕೂರಿನ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.

    ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಮಠದ ಪೀಠಾಧಿಪತಿ ಲಿಂ.ಶಾಂಡಿಲ್ಯ ಶ್ರೀಗಳ ತೃತೀಯ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶಾಂಡಿಲ್ಯ ವೃಕ್ಷ ಅತ್ಯಂತ ಪವಿತ್ರ ವೃಕ್ಷವಾಗಿದ್ದು, ಶಾಂಡಿಲ್ಯ ವೃಕ್ಷದಡಿ ತಪಗೈದು ಭಗವಂತನ ಕೃಪಾಶೀರ್ವಾದ ಪಡೆದ ಪವಾಡ ಪುರುಷ ಶಾಂಡಿಲ್ಯ ಶ್ರೀ ಪ್ರೀತಿ, ಅನುಕಂಪ, ದಾನ-ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಜಗತ್ತಿಗೆ ಪಸರಿಸುವ ಕಾಯಕವನ್ನು ಬಹಳ ಹಿಂದೆಯೇ ಮಾಡಿದ್ದಾರೆ ಎಂದರು.

    ಬೆಳಗ್ಗೆ ಲಲಿತಾ ಸಹಸ್ರ ನಾಮಾವಳಿ ಪಠಣ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಠದ ಆವರಣದಲ್ಲಿ ನಿರ್ಮಾಣಗೊಂಡ ಶಿಲಾ ಮಂಟಪದ ಉದ್ಘಾಟನೆ, ಧರ್ಮಸಭೆ ಮತ್ತು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಬೆಳಗಾವಿ ಮುಕ್ತಿಮಠದ ಸೋಮೇಶ್ವರ ಶಿವಾಚಾರ್ಯ ಶ್ರೀಗಳು, ಹಿರೇಮುನವಳ್ಳಿಯ ಶಾಂಡಿಲ್ಯೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಶ್ರೀಗಳು, ಬೈಲಹೊಂಗಲದ ಮೂರುಸಾವಿರ ಮಠದ ನೀಲಕಂಠ ಶ್ರೀಗಳು, ಕಂಬಾಳ ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಶ್ರೀಗಳು, ಅರಳಿಕಟ್ಟಿ ತೋಂಟದಾರ್ಯ ಮಠದ ಶಿವಮೂರ್ತಿ ಶ್ರೀಗಳು, ದೊಡ್ಡಬಳ್ಳಾಪುರ ಬಸವದೇವರ ಮಹಾ ಸಂಸ್ಥಾನ ಮಠದ ನಿರಂಜನ ದೇಶಿಕೇಂದ್ರ ಶ್ರೀಗಳು, ಗಂದಿಗವಾಡ ಹಿರೇಮಠದ ಮೃತ್ಯುಂಜಯ ಶ್ರೀಗಳು, ಮಾಜಿ ಶಾಸಕರಾದ ಅರವಿಂದ ಪಾಟೀಲ, ಶಿವಾನಂದ ಅಂಬಡಗಟ್ಟಿ, ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹಾದೇವ ಕೋಳಿ, ಜಿಪಂ ಸದಸ್ಯರಾದ ಜೀತೇಂದ್ರ ಮಾದಾರ, ಸುರೇಶ ಮ್ಯಾಗೇರಿ, ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಶೀನಪ್ಪ, ಸ್ಥಳೀಯ ಮುಖಂಡರಾದ ಸಂಜಯ ಕಂಚಿ, ಬಸವರಾಜ ಸಾಣಿಕೊಪ್ಪ, ಜ್ಯೋತಿಬಾ ಭರಮಪ್ಪನವರ, ನಾಗೇಂದ್ರ ಚೌಗುಲಾ, ಯಶವಂತ ಕೋಡೊಳಿ ಸೇರಿ ನಾಡಿನ ವಿವಿಧ ಭಾಗಗಳ ಧಾರ್ಮಿಕ ಮತ್ತು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.

    ಅವರೊಳ್ಳಿ-ಬಿಳಕಿ ಮತ್ತು ಹುಣಸಿಕಟ್ಟಿ ರುದ್ರಸ್ವಾಮಿಮಠದ ಚನ್ನಬಸವದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಶರಥ ಬನೋಶಿ ಸ್ವಾಗತಿಸಿದರು. ವಿವೇಕ ಕುರಗುಂದ ನಿರೂಪಿಸಿದರು. ಮಂಜುನಾಥ ಕೋಲೇಕರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts