More

    ಶ್ರೀರಾಮಮಂದಿರವನ್ನು ನಿರ್ಮಾಣಕ್ಕೂ ಮೊದಲೇ ನೋಡೋ ಅವಕಾಶ ಇಲ್ಲಿದೆ!

    ನವದೆಹಲಿ: ಈಗ ಬಹುತೇಕ ಹಲವೆಡೆ ಅಯೋಧ್ಯೆಯ ಶ್ರೀರಾಮಮಂದಿರದ್ದೇ ಸುದ್ದಿ. ಏಕೆಂದರೆ ಮಂದಿನ ನಿರ್ಮಾಣಕ್ಕಾಗಿ ದೇಶಾದ್ಯಂತ ನಿಧಿ ಸಂಗ್ರಹ ಅಭಿಯಾನ ಆರಂಭಗೊಂಡಿದೆ. ಅದಕ್ಕಾಗಿ ಹಲವರು ನಿಧಿ ಸಮರ್ಪಣೆ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶಿಲಾನ್ಯಾಸ ಆಗಿರುವ ಶ್ರೀರಾಮಮಂದಿರ ಹೇಗಿರಬಹುದು ಎಂಬ ಕುತೂಹಲ ಹಲವರಿಗೆ ಇದ್ದೇ ಇದೆ. ಮಾತ್ರವಲ್ಲ, ಅದನ್ನು ನಿರ್ಮಾಣಕ್ಕೆ ಮೊದಲೇ ಕಣ್ತುಂಬಿಸಿಕೊಳ್ಳುವ ಅವಕಾಶ ಕೂಡ ಇಲ್ಲಿದೆ.

    ಹೌದು.. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಮಂದಿರವನ್ನು ಎಷ್ಟೋ ಭಕ್ತರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದು, ಅದನ್ನು ಈಗಲೇ ಜನರಿಗೆ ತೋರಿಸುವ ಪ್ರಯತ್ನವನ್ನು ಉತ್ತರಪ್ರದೇಶ ಸರ್ಕಾರ ಮಾಡಿದೆ. ಅಂದರೆ ಜನವರಿ 26ರಂದು ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಉತ್ತರಪ್ರದೇಶದಿಂದ ಶ್ರೀ ರಾಮಮಂದಿರದ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದೆ. ಐತಿಹಾಸಿಕ ನಗರಿ ಅಯೋಧ್ಯೆಯ ಪರಂಪರೆ, ಶ್ರೀರಾಮ ಮಂದಿರದ ಮಾದರಿ, ದೀಪೋತ್ಸವದ ದೃಶ್ಯ ಮತ್ತು ರಾಮಾಯಣದ ಹಲವು ದೃಶ್ಯಗಳನ್ನು ಚಿತ್ರಿಸುವ ಬೊಂಬೆಗಳನ್ನು ಒಳಗೊಂಡ ಭವ್ಯ ಸ್ತಬ್ಧಚಿತ್ರವು ಸಾರ್ವಜನಿಕ ವೀಕ್ಷಣೆಗೆ ಈಗಾಗಲೇ ತಯಾರಾಗಿದೆ.

    ಇದನ್ನೂ ಓದಿ: ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    “ಅಯೋಧ್ಯೆ ಉತ್ತರಪ್ರದೇಶದ ಪುಣ್ಯ ಸ್ಥಳ ಮತ್ತು ರಾಮ ಮಂದಿರ ಭಕ್ತರಿಗೆ ಭಾವನಾತ್ಮಕ ವಿಷಯ. ಆದ್ದರಿಂದ ಈ ಬಾರಿ ಅದನ್ನೇ ವಿಷಯವನ್ನಾಗಿ ತೆಗೆದುಕೊಂಡಿದ್ದೇವೆ” ಎಂದು ಪೆರೇಡ್​ನಲ್ಲಿ ಭಾಗವಹಿಸುತ್ತಿರುವ ರಾಜ್ಯ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಳದಿ ರೇಷ್ಮೆ ಧೋತಿ, ರುದ್ರಾಕ್ಷಿ ಮಾಲೆ ಮತ್ತು ಬಿಲ್ಲು ಹಿಡಿದ ಶ್ರೀ ರಾಮಚಂದ್ರನ ಪಾತ್ರದಲ್ಲಿ ಚಂದೌಳಿ ಜಿಲ್ಲೆಯ ಲಕ್ಷ್ಮಣಗಢದ ನಿವಾಸಿ ಅಜಯ್​ಕುಮಾರ್ ಎಂಬುವರು ಕಾಣಿಸಿಕೊಳ್ಳಲಿದ್ದಾರೆ. ನರ್ತಕರನ್ನೊಳಗೊಂಡ ಕಲಾವಿದರ ಗುಂಪು ಕೂಡ ಸ್ತಬ್ಧಚಿತ್ರದೊಂದಿಗೆ ಮನಸೆಳೆಯಲಿದೆ. (ಏಜೆನ್ಸೀಸ್​)

    ಗಗನಕ್ಕೇರಿದ ಪೆಟ್ರೋಲ್, ಡೀಸೆಲ್​​ ದರ! ಒಂದೇ ವಾರದಲ್ಲಿ ನಾಲ್ಕು ಬಾರಿ ಏರಿಕೆ

    ಇದು ಮ್ಯಾಜಿಕ್ ಸ್ಯಾಂಡ್​.. ಬಿಸಿ ಮಾಡಿದ್ರೆ ಸಾಕು ಚಿನ್ನ ಆಗುತ್ತೆ!; 4 ಕೆ.ಜಿ. ಮರಳಿಗೆ 50 ಲಕ್ಷ ರೂ. ಕೊಟ್ಟೇ ಬಿಟ್ಟ ಜುವೆಲ್ಲರಿ ಮಾಲೀಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts