More

    ಮೇ 19ರಂದು ಕವಿ ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ಮೂರು ಕೃತಿಗಳ ಲೋಕಾರ್ಪಣೆ

    ಮೈಸೂರು: ವಿಮರ್ಶಕ, ಕವಿ ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಮೇ 19ರಂದು ಬೆಳಗ್ಗೆ 11ಕ್ಕೆ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿದೆ ಎಂದು ಪ್ರಾಧ್ಯಾಪಕ ಪ್ರೊ.ಕೆ.ತಿಮ್ಮಯ್ಯ ತಿಳಿಸಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಚನ ಪ್ರಕಾಶನಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ‘110 ಆಧುನಿಕ ವಚನಗಳು’, ‘ನೆಲದ ಮರೆಯ ನಿಧಾನ’ ಹಾಗೂ ‘ನಾನೆಂಬುದು ನಾನಲ್ಲ’ ಎಂಬ ಕೃತಿಗಳು ಬಿಡುಗಡೆಯಾಗಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ಪ್ರೊ.ರಾಗೌ ಕೃತಿ ಬಿಡುಗಡೆಗೊಳಿಸುವರು. ಕೃತಿ ಕುರಿತು ಪ್ರೊ.ಎಂ.ಎಚ್.ರುದ್ರಮುನಿ, ಡಾ.ಆರ್.ಗುರುಸ್ವಾಮಿ ಹಾಗೂ ಡಾ.ಎಂ.ಎಸ್.ಅನಿತ ಮಾತನಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

    ಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಲೇಖಕರಾದ ಡಾ.ಆರ್.ಗುರುಸ್ವಾಮಿ, ಕೆ.ಸಿ.ಓಂಕಾರಪ್ಪ, ಡಾ.ಜಿ.ಮಾದಪ್ಪ, ಲತಾ ಮೋಹನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts