More

  26ರಂದು ಬೆಂಗಳೂರುಗೆ ಚಲೋ ಕಾರ್ಯಕ್ರಮ

  ಕವಿತಾಳ: ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮೀತಿ ವತಿಯಿಂದ ದಿ.26 ಮತ್ತು 28ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಂಘಟನೆಯ ರಾಜ್ಯ ಸಂಚಾಲಕ ಎಚಿಡಿ ಮೈಬೂಬ್ ತಿಳಿಸಿದರು.

  ಇದನ್ನೂ ಓದಿ: ಬೆಂಗಳೂರು ಕಂಬಳದ ಸಿದ್ಧತೆ ಕುರಿತು ಗುರುಕಿರಣ್​ ಮಾಹಿತಿ

  ಮಂಗಳವಾರ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರೃ, ಪ್ರಜಾಪ್ರಭುತ್ವ , ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಅಕ್ರಮಣ ವಿರೋಧಿಸಿ ಧರ್ಮನಿರಾಪೇಕ್ಷ ,

  ಸಂವಿಧಾನ ರಕ್ಷಣೆಗಾಗಿ ಐತಿಹಾಸಿಕ ದೇಹಲಿ ರೈತ ಹೋರಾಟ ಹಾಗೂ ಕಾರ್ಮಿಕರ ಅಖಿಲ ಭಾರತ ಹರತಾಳದ ನೆನಪಿನಲ್ಲಿ ರೈತ ಕಾರ್ಮಿಕ ವಿರೋಧಿ ರಾಜ್ಯ ಕಾರ್ಮಿಕ ಕಾಯ್ದೆಗಳನ್ನು ರದ್ದುಗೋಳಿಸಲು,

  ಜನ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಿ ಪರ್ಯಾಯ ನೀತಿಗಳಿಗಾಗಿ ಬೆಂಗಳೂರಿನಲ್ಲಿ 72ಗಂಟೆಗಳ ಬೃಹತ್ ರಾಜಭವನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕವಿತಾಳ ಮತ್ತು ಸುತ್ತಮುತ್ತಲಿನ ಕಟ್ಟಡ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೋಳಿಸಬೇಕೆಂದು ವಿನಂತಿಸಿದ್ದಾರೆ.

  ಅಖೀಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಅಧ್ಯಕ್ಷ ಬಸವಲಿಂಗಪ್ಪ, ರಾಜ್ಯ ಉಪಾಧ್ಯಕ್ಷ ರಮೇಶ ಇರಬಗೇರ, ಕವಿತಾಳ ಹೋಬಳಿ ಪ್ರಧಾನ ಕಾರ್ಯದರ್ಶಿ ಮೌನೇಶ ಬುಳ್ಳಪೂರ, ಹೋಬಳಿ ಅಧ್ಯಕ್ಷ ಮೌನೇಶ ಕಲಂಗೇರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts