More

    21ರಂದು ಸಾವಯವ ಕೃಷಿ ಉತ್ಪನ್ನಗಳ ಸಂತೆ

    ಬೈಲಹೊಂಗಲ: ಜನತೆಯ ಆರೋಗ್ಯದ ದೃಷ್ಟಿಯಿಂದ, ಸಾವಯವ ಕೃಷಿ ಉತ್ತೇಜನಕ್ಕಾಗಿ ಫೆ. 21ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಪ್ರಥಮ ಬಾರಿಗೆ ಸಾವಯವ ಕೃಷಿ ಉತ್ಪನ್ನಗಳ ಸಂತೆ ಏರ್ಪಡಿಸಲಾಗಿದೆ ಎಂದು ಸಾವಯವ ಕೃಷಿ ಉತ್ಪನ್ನಗಳ ಸಂತೆ ಸಂಘಟಕ ವಿಜಯ ಪತ್ತಾರ ಹೇಳಿದರು.

    ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿದ್ಯಾನಗರದ 3ನೇ ಕ್ರಾಸ್‌ನ ಬಿಎಸ್‌ಎನ್‌ಎಲ್ ಟಾವರ್ ಸಮೀಪದ ನವಗ್ರಹ ವಾಟಿಕಾ ಉದ್ಯಾನವನದಲ್ಲಿ ಸಂತೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸದೃಢ ಸಮಾಜ ನಿರ್ಮಾಣಕ್ಕಾಗಿ ರಾಸಾಯನಿಕ ಮುಕ್ತ ಆಹಾರ ಒದಗಿಸುವ ಸಂತೆ ಪ್ರತಿ ಭಾನುವಾರ ಜರುಗಲಿದ್ದು, 40 ರೈತರು ಭಾಗವಹಿಸಲಿದ್ದಾರೆ. 32 ಮಳಿಗೆಗಳಲ್ಲಿ ಸಾವಯವ ತರಕಾರಿ, ಹಣ್ಣು, ಹಂಪಲ, ಬೆಲ್ಲ, ಅಕ್ಕಿ, ಜೋಳ ಹಾಗೂ ಇನ್ನಿತರ ಸಿರಿ ಧಾನ್ಯ ಹಾಗೂ ಜೀವನಾವಶ್ಯಕ ಸಾವಯವ ಉತ್ಪನ್ನಗಳ ಪ್ರದರ್ಶನ- ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. ಶಾಖಾ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಂತೆ ಉದ್ಘಾಟಿಸುವರು. ಚಿಕ್ಕೋಡಿ ಸಾವಯವ ಕೃಷಿ ಪ್ರಚಾರಕ ರಾಜೇಶ್ವರ ಉಪನ್ಯಾಸ ನೀಡುವರು. ಪುರಸಭೆ ಸದಸ್ಯೆ ವಾಣಿ ಪತ್ತಾರ, ಸಾವಯವ ಕೃಷಿ ಪಂಡಿತರು, ಚಿಂತಕರು, ರೈತರು ಭಾಗವಹಿಸುವರು ಎಂದರು. ಯೋಗ ಗುರು ಸಂಗಮೇಶ ಸವದತ್ತಿಮಠ ಮಾತನಾಡಿ, ಸಾವಯವ ಕೃಷಿಗೆ ಉತ್ತೇಜನ ನೀಡಲು ಸಾವಯವ ಕೃಷಿ ತರಬೇತಿ ನೀಡಲಾಗುವುದು. ಯೋಗ್ಯ ದರದಲ್ಲಿ ಕೃಷಿ ಉತ್ಪನ್ನಗಳು ಲಭಿಸಲಿವೆ ಎಂದರು. ಕೃಷಿಕ ಬಾಬುರಾವ್ ಪಾಟೀಲ, ಅಶೋಕ ಗದಗ, ಮಹಾಬಲೇಶ್ವರ ವಾಲಿ, ಚನ್ನಬಸಯ್ಯ ಕಟಾಪುರಿಮಠ, ಸಿದ್ಧಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts