More

    ರಾಜ್ಯದಲ್ಲಿ 1 ಸಾವಿರ ದಾಟಿತು ಒಮಿಕ್ರಾನ್ ಪ್ರಕರಣ; ಆದರೂ ಒಂದು ಸಮಾಧಾನದ ಸಂಗತಿ ಏನೆಂದರೆ…

    ಬೆಂಗಳೂರು: ರಾಜ್ಯದಲ್ಲಿ ಇದೇ ವರ್ಷದ ಮೊದಲ ದಿನ ಮೂರೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಕರೊನಾ ಪ್ರಕರಣಗಳ ಸಂಖ್ಯೆ ಒಂದು ಸಾವಿರವನ್ನು ದಾಟಿತ್ತು. ಬಳಿಕ ಸತತ ಮೂರೂ ದಿನ ಪ್ರಕರಣಗಳ ಸಂಖ್ಯೆ ಸಾವಿರ ದಾಟಿ ಸಾವಿರದ ಹ್ಯಾಟ್ರಿಕ್ ಬಾರಿಸಿತ್ತು.

    ಅದಾಗಿ 26 ದಿನಗಳ ಬಳಿಕ ಇದೀಗ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ಸಾವಿರ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತೊಂದೇ ದಿನ 185 ಮಂದಿಯಲ್ಲಿ ಒಮಿಕ್ರಾನ್​ ಪ್ರಕರಣ ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿನ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,115ಕ್ಕೆ ಏರಿದೆ.

    ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲೇ ಕರೊನಾ ಹ್ಯಾಟ್ರಿಕ್​: ಮೊದಲ ಮೂರು ದಿನವೂ ಸಾವಿರ ದಾಟಿದ ಪ್ರಕರಣ..

    ಮತ್ತೊಂದೆಡೆ ರಾಜ್ಯದಲ್ಲಿ ಇಂದು 38,083 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಆ ಪೈಕಿ ಬೆಂಗಳೂರಿನಲ್ಲೇ 17,717 ಪ್ರಕರಣ ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ 1.89 ಲಕ್ಷಕ್ಕೆ ತಲುಪಿದೆ. ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,28,711ಕ್ಕೆ ಏರಿದೆ.

    ಇದನ್ನೂ ಓದಿ: ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

    38 ಸಾವಿರ ಕೋವಿಡ್​-19 ಹಾಗೂ 1 ಸಾವಿರ ದಾಟಿದ ಒಮಿಕ್ರಾನ್ ಪ್ರಕರಣಗಳ ನಡುವೆಯೂ ಒಂದು ಸಮಾಧಾನದ ಸಂಗತಿ ಏನೆಂದರೆ ಕೋವಿಡ್​ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ. ನಿನ್ನೆ 48,905 ಇದ್ದ ಕೋವಿಡ್​ ಪ್ರಕರಣ ಇಂದು 38,083ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಕೂಡ ಮೊನ್ನೆ ಶೇ. 26.70, ನಿನ್ನೆ ಶೇ. 22.51 ಇದ್ದಿದ್ದು ಇಂದು ಶೇ. 20.44ಕ್ಕೆ ಇಳಿದಿದೆ.

    ‘ವಿಕ್ರಾಂತ್ ರೋಣ’ ಬಿಡುಗಡೆ ಮತ್ತೆ ಮುಂದಕ್ಕೆ: ಮುಂದಿನ ದಿನಾಂಕ…

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts