More

    ಲೋಕಸಭೆಯ ಸ್ಪೀಕರ್​ ಮಗಳು ಪರೀಕ್ಷೆ ಬರೆಯದೇ ಐಎಎಸ್​ ಪಾಸ್​? ನಿಜಾಂಶ ಇಲ್ಲಿದೆ ನೋಡಿ…

    ನವದೆಹಲಿ: ಸೆಲೆಬ್ರಿಟಿಗಳು, ಗಣ್ಯರ ಮಕ್ಕಳು ಏನು ಮಾಡಿದರೂ ಸುದ್ದಿಯಾಗುವುದು ಸಾಮಾನ್ಯ. ಆದರೆ ಲೋಕಸಭೆಯ ಸ್ಪೀಕರ್​ ಓಂ ಬಿರ್ಲಾ ಅವರ ಮಗಳು ಅಂಜಲಿ ಬಿರ್ಲಾ ಬಗ್ಗೆ ಬೇರೆಯದ್ದೇ ತರದ ಸುದ್ದಿಯಾಗಿದೆ. ಆಕೆ ಯುಪಿಎಸ್​ಸಿ ಪರೀಕ್ಷೆ ಬರೆಯದಿದ್ದರೂ ಅಪ್ಪನ ಹೆಸರಿನಿಂದಾಗಿ ಐಎಎಸ್​ ಪಾಸ್​ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಅಷ್ಟಕ್ಕೂ ಇದು ನಿಜವೇ? ಅಂಜಲಿ ಪರೀಕ್ಷೆ ಬರೆದಿಲ್ಲವೇ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ನರೇಗಾ ಕೆಲಸದ ದಿನ 100ರಿಂದ 150ಕ್ಕೆ ಹೆಚ್ಚಳ; 15 ದಿನಗಳೊಳಗೆ ವರದಿ ಸಲ್ಲಿಕೆ

    ಅಂಜಲಿ ಬಿರ್ಲಾ ಬಗ್ಗೆ ಹುಟ್ಟಿಕೊಂಡ ಈ ಸುದ್ದಿಯನ್ನು ಎಎಫ್​ಪಿ ಸುದ್ದಿ ಮಾಧ್ಯಮ ಫ್ಯಾಕ್ಟ್​ ಚೆಕ್​ ಮಾಡಿದೆ. ಫ್ಯಾಕ್ಟ್​ ಚೆಕ್​ನಲ್ಲಿ ನಿಜಾಂಶ ಹೊರಬಿದ್ದಿದೆ. ಅಂಜಲಿ ಯುಪಿಎಸ್​ಸಿಯ ಮೂರೂ ಪರೀಕ್ಷೆಗಳನ್ನು ಬರೆದಿದ್ದಾರೆ. ಆ ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ. ಮೆರಿಟ್​ ಪಟ್ಟಿಯಲ್ಲಿ ಅವರ ಹೆಸರು ರೋಲ್​ ನಂಬರ್​ನೊಂದಿಗೆ ಕಾಣಿಸಿಕೊಂಡಿದೆ. ಯುಪಿಎಸ್​ಸಿ ಅಧಿಕೃತ ವೆಬ್​ಸೈಟ್​ನಲ್ಲೂ ಅದು ಲಭ್ಯವಿದೆ.

    ಇದನ್ನೂ ಓದಿ: ವಿಮಾನಕ್ಕೇ ಕಾಂಪಿಟೇಶನ್​ ಕೊಡುತ್ತೆ ಈ ರೈಲು! ಒಂದೇ ಗಂಟೆಯಲ್ಲಿ 620 ಕಿಮೀ ಪ್ರಯಾಣ

    ಲೋಕಸಭೆಯ ಸ್ಪೀಕರ್​ ಮಗಳು ಪರೀಕ್ಷೆ ಬರೆಯದೇ ಐಎಎಸ್​ ಪಾಸ್​? ನಿಜಾಂಶ ಇಲ್ಲಿದೆ ನೋಡಿ...ಅಂಜಲಿ ಅವರ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಆಕೆ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೂರು ಪರೀಕ್ಷೆಗಳನ್ನು ಬರೆದು ಪಾಸ್​ ಆಗುವುದು ಅಷ್ಟು ಸುಲಭವಲ್ಲ. ಯುಪಿಎಸ್​ಸಿ ತೀರಾ ಪಾರದರ್ಶಕವಾಗಿ ಕೆಲಸ ಮಾಡುವ ಇನ್​ಸ್ಟಿಟ್ಯೂಟ್​. ಕನಿಷ್ಟ ಪಕ್ಷ ಅದಕ್ಕಾದರೂ ಗೌರವ ಕೊಡಿ ಎಂದು ಹೇಳಿದ್ದಾರೆ. ನಾನು ಒಮ್ಮೆ ಕೇವಲ ಎಂಟು ಅಂಕಗಳಿಂದಾಗಿ ಐಎಎಸ್​ ಅಧಿಕಾರಿಯಾಗುವ ಅವಕಾಶ ತಪ್ಪಿಸಿಕೊಂಡಿದ್ದೆ. ಈ ರೀತಿಯ ಪಾರದರ್ಶಕ ಅಧಿಕಾರಗಳು ಯಾರ ರಕ್ತ ಎನ್ನುವುದರ ಮೇಲೆ ನಿರ್ಧರಿತವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts