ನವದೆಹಲಿ: ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲೂ ಸುದ್ದಿಯಾಗಿರುವ ಮೀರಾ ಇದೀಗ ಟ್ರಕ್ ಡ್ರೈವರ್ಗಳಿಗಾಗಿ ಹುಡುಕಾಡುತ್ತಿದ್ದಾರಂತೆ.
ಹೌದು! ಮೀರಾಬಾಯಿದು ಮಧ್ಯಮ ವರ್ಗದ ಕುಟುಂಬ. ಆಕೆ ಪ್ರತಿದಿನ ನೊಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಆಕೆಯ ಮನೆಯಿಂದ ಇಂಫಾಲ್‌ನ ಖುಮಾನ್ ಲಂಪಾಕ್ ಕ್ರೀಡಾ ಸಂಕೀರ್ಣದಲ್ಲಿರುವ ತರಬೇತಿ ಕೇಂದ್ರಕ್ಕೆ ವೇಟ್ ಲಿಫ್ಟಿಂಗ್ ಕಲಿಯಲು ಹೋಗುತ್ತಿದ್ದಳಂತೆ. ಆ ವೇಳೆ ಅನೇಕ ಟ್ರಕ್ ಚಾಲಕರು, ಆಕೆಯ ಸಹಾಯಕ್ಕೆ ಬಂದು, ಅವಳನ್ನು ತರಬೇತಿ ಕೇಂದ್ರದವರೆಗೆ ಡ್ರಾಪ್ ಮಾಡುತ್ತಿದ್ದರಂತೆ.
ಇದೀಗ ಬೆಳ್ಳಿ ಗೆದ್ದಿರುವ ಮೀರಾ ತನ್ನ ಹಿಂದಿನ ದಾರಿಯನ್ನು ತಿರುಗಿ ನೋಡಿದ್ದಾರೆ. ಅವರೆಲ್ಲರೂ ಸಹಾಯಕ್ಕೆ ನಿಂತಿದ್ದರಿಂದಲೇ ನಾನು ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಇದೀಗ ಅವರನ್ನೆಲ್ಲ ಭೇಟಿ ಮಾಡಿ ಧನ್ಯವಾದ ತಿಳಿಸಬೇಕಿದೆ ಎಂದು ಮೀರಾ ಹೇಳಿದ್ದಾರೆ. ಅದಕ್ಕಾಗಿಯೇ ಆ ಟ್ರಕ್ ಡ್ರೈವರ್ಗಳನ್ನು ಹುಡುಕಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ನಭಾ ನಟೇಶ್: ಬಾಲಿವುಡ್ ಎಂಟ್ರಿಗೆ ಕನ್ನಡತಿ ಸಜ್ಜು
ಜಾಕ್ವೆಲಿನ್ ಫಸ್ಟ್ ಲುಕ್ ಪೋಸ್ಟರ್ಗೆ ಅಭಿಮಾನಿಗಳು ಫಿದಾ: ವಿಕ್ರಾಂತ್ ರೋಣನಿಗೆ ಗಡಂಗ್ ರಕ್ಕಮ್ಮ ಸಾಥ್!