More

    ಬಾಯ್​ಫ್ರೆಂಡ್​ ಜತೆಗೆ ಸೆಕ್ಸ್ ಮಾಡಿ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳಾ ಬಾಕ್ಸರ್! ಶಿಕ್ಷೆಯಿಂದ ಪಾರಾಗಿದ್ದೇಕೆ?

    ನ್ಯೂಯಾರ್ಕ್: ಬಾಯ್​ಫ್ರೆಂಡ್​ ಜತೆಗೆ ಸಂಭೋಗ ಮಾಡಿದ್ದರಿಂದಾಗಿ ನಿಷೇಧಿತ ಉದ್ದೀಪನ ಮದ್ದು ದೇಹದೊಳಗೆ ಸೇರಿದ ಕಾರಣ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕದ ಮಹಿಳಾ ಬಾಕ್ಸರ್ ವರ್ಜಿನಿಯಾ ಫುಚಸ್‌ಗೆ ಯುಎಸ್ ಉದ್ದೀಪನ ನಿಗ್ರಹ ಘಟಕ (ಯುಎಸ್‌ಎಡಿಎ) ಯಾವುದೇ ಶಿಕ್ಷೆ ವಿಧಿಸದೆ ದೋಷಮುಕ್ತಗೊಳಿಸಿದೆ.

    ಇದನ್ನೂ ಓದಿ: ಪಿಟಿ ಉಷಾಗೆ ಒಲಿಂಪಿಕ್ಸ್ ಪದಕ ಕೈತಪ್ಪಿದಾಗ ಚಿನ್ನ ಗೆದ್ದ ಅಥ್ಲೀಟ್ ಕೂಡ ಅತ್ತಿದ್ದಳು!

    32 ವರ್ಷದ ಫ್ಲೈವೇಟ್​ ಬಾಕ್ಸರ್ ವರ್ಜಿನಿಯಾ ಅವರು ಕಳೆದ ಫೆಬ್ರವರಿ 13ರಂದು ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ) ಡೋಪಿಂಗ್ ಪರೀಕ್ಷೆಗೆ ಒಳಪಡಿಸಿತ್ತು. ಆಗ ಅವರ ಮೂತ್ರದ ಸ್ಯಾಂಪಲ್‌ನಲ್ಲಿ ಎರಡು ನಿಷೇಧಿತ ಉದ್ದೀಪನ ಮದ್ದುಗಳು ಪತ್ತೆಯಾಗಿದ್ದವು. ‘ಮೂತ್ರದ ಸ್ಯಾಂಪಲ್‌ನಲ್ಲಿ ಅಲ್ಪ ಪ್ರಮಾಣದ ಲೆಟ್ರೋರೊಲ್ ಮೆಟಬೋಲೈಟ್ ಮತ್ತು ಜಿಡಬ್ಲ್ಯು1516 ಮೆಟಬೋಲೈಟ್ ಉದ್ದೀಪನ ಪತ್ತೆಯಾಗಿತ್ತು. ಲೈಂಗಿಕ ಕ್ರಿಯೆಯಿಂದಾಗಿ ಈ ಉದ್ದೀಪನ ಮದ್ದು ತಮ್ಮ ದೇಹದೊಳಗೆ ಸೇರಿದೆ ಎಂದು ಅವರು ವಾದಿಸಿದ್ದರು. ಇದರಿಂದಾಗಿ ಅವರು ಉದ್ದೇಶಪೂರ್ವಕವಾಗಿ ಉದ್ದೀಪನ ಸೇವಿಸಿಲ್ಲ ಎಂಬುದು ತಿಳಿದುಬಂದಿದೆ’ ಎಂದು ಯುಎಸ್‌ಎಡಿಎ ಪ್ರಕರಣದ ತನಿಖಾ ವರದಿಯಲ್ಲಿ ತಿಳಿಸಿದೆ.

    ಬಾಯ್​ಫ್ರೆಂಡ್​ ಜತೆಗೆ ಸೆಕ್ಸ್ ಮಾಡಿ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳಾ ಬಾಕ್ಸರ್! ಶಿಕ್ಷೆಯಿಂದ ಪಾರಾಗಿದ್ದೇಕೆ?

    ವರ್ಜಿನಿಯಾ ಫುಚಸ್ ಅವರ ಬಾಯ್​ಫ್ರೆಂಡ್​ ಲೈಂಗಿಕ ಚಟುವಟಿಕೆಯ ವೇಳೆ ಇವೆರಡು ನಿಷೇಧಿತ ಉದ್ದೀಪನಗಳನ್ನು ಒಳಗೊಂಡ ಥೆರಪೆಯುಟಿಕ್ ಡೋಸ್‌ಗಳನ್ನು ಬಳಸಿದ್ದರು. ಇದರಿಂದಾಗಿ ವರ್ಜಿನಿಯಾ ಫುಚಸ್ ದೇಹದೊಳಗೂ ಇವೆರಡು ಉದ್ದೀಪನಗಳು ಸೇರಿಕೊಂಡಿವೆ. ವರ್ಜಿನಿಯಾ ಫುಚಸ್ ನಿರ್ಲಕ್ಷ್ಯದಿಂದಲೂ ಈ ಉದ್ದೀಪನಗಳು ಅವರ ದೇಹದೊಳಗೆ ಸೇರಿವೆ ಎನ್ನಲಾಗದು. ಹೀಗಾಗಿ ಅವರಿಗೆ ನಿಷೇಧ ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ಯುಎಸ್‌ಎಡಿಎ ತಿಳಿಸಿದೆ.

    ಇದನ್ನೂ ಓದಿ: ಬಾಡಿಬಿಲ್ಡಿಂಗ್ ಸೀಕ್ರೆಟ್ ಬಿಚ್ಚಿಟ್ಟ 8 ಬಾರಿ ಮಿಸ್ಟರ್ ಒಲಂಪಿಯಾ ರೋನಿ ಕೊಲ್ಮಾನ್…

    ಮಾಂಸಾಹಾರದಲ್ಲಿನ ಸೋಂಕು ಅಥವಾ ವೈದ್ಯರು ಸೂಚಿಸಿದ ಔಷಧಿಯ ಮೂಲಕ ನಿಷೇಧಿತ ಉದ್ದೀಪನಗಳು ದೇಹದೊಳಗೆ ಸೇರಿದಾಗ ವಿನಾಯಿತಿ ನೀಡುವಂತೆ ವರ್ಜಿನಿಯಾ ಫುಚಸ್ ಅವರ ಈ ಸೆಕ್ಸ್ ಪ್ರಕರಣವನ್ನೂ ಪರಿಗಣಿಸಿ, ಅವರು ನಿಯಮವನ್ನು ಉಲ್ಲಂಸಿದ್ದಾರೆ ಎಂದು ಪರಿಗಣಿಸುವುದಿಲ್ಲ ಎಂದು ಯುಎಸ್‌ಎಡಿಎ ಮುಖ್ಯಸ್ಥ ಟ್ರಾವಿಸ್ ಟೈಗರ್ಟ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸಚಿನ್-ಯುವರಾಜ್ ಮೊದಲ ಭೇಟಿ ಹೇಗಿತ್ತು ಗೊತ್ತಾ?

    ಇನ್ನು ಬಾಯ್​ಫ್ರೆಂಡ್​ ದೂರ, ಒಲಿಂಪಿಕ್ಸ್​​ನತ್ತ ಗಮನ…

    ವರ್ಜಿನಿಯಾ ಫುಚಸ್ 2016ರಲ್ಲಿ ರಿಯೋ ಒಲಿಂಪಿಕ್ಸ್ ಅರ್ಹತೆಯಿಂದ ಸ್ವಲ್ಪದರಲ್ಲಿಯೇ ವಂಚಿತರಾಗಿದ್ದರೆ, ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ಗರಿಷ್ಠ 4 ವರ್ಷಗಳ ನಿಷೇಧ ಶಿಕ್ಷೆಯಾಗುವ ಸಾಧ್ಯತೆ ಇತ್ತು. ಆದರೆ ಈಗ ಶಿಕ್ಷೆಯಿಂದ ಪಾರಾಗಿರುವುದರಿಂದ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯತ್ತ ಗಮನಹರಿಸುವೆ. ಈ ಪ್ರಕರಣ ತನಗೊಂದು ಪಾಠ ಕಲಿಸಿದೆ. ಸದ್ಯಕ್ಕೆ ಬಾಯ್​ಫ್ರೆಂಡ್​ಅನ್ನು ದೂರವಿಡುವೆ ಎಂದು ವರ್ಜಿನಿಯಾ ಫುಚಸ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ನನಗೆ ಹಣ ಬೇಕು, ನಾನು ಆಡುತ್ತೇನೆ ಎಂದ ಟೆನಿಸ್ ಆಟಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts