More

    ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!

    ನ್ಯೂಯಾರ್ಕ್: ಕ್ರೀಡಾಪಟುಗಳೆಂದರೆ ಅತ್ಯಂತ ಸದೃಢವಾಗಿರುತ್ತಾರೆ. ಅದೇ ರೂಪದರ್ಶಿಯರೆಂದರೆ ಸಣಕಲಾಗಿರುತ್ತಾರೆ. ಇವರಿಬ್ಬರ ನಡುವೆ ವರ್ಕೌಟ್ ಚಾಲೆಂಜ್ ಏರ್ಪಟ್ಟರೆ, ಕ್ರೀಡಾಪಟುವೇ ಗೆಲ್ಲುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಅಮೆರಿಕದಲ್ಲಿ 2 ಬಾರಿಯ ಒಲಿಂಪಿಯನ್ ಮತ್ತು ರೂಪದರ್ಶಿಯ ನಡುವೆ ನಡೆದ ವರ್ಕೌಟ್ ಚಾಲೆಂಜ್‌ನಲ್ಲಿ ಇದಕ್ಕೆ ವ್ಯತಿರಿಕ್ತ ಫಲಿತಾಂಶ ಬಂದಿದೆ!

    ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!

    ಅಮೆರಿಕದ ಮಧ್ಯಮ-ಅಂತರ ಓಟಗಾರ ನಿಕ್ ಸೈಮಂಡ್ಸ್ ತಮ್ಮದೇ ಆದ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ. ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ 7.7 ಲಕ್ಷ ಹಿಂಬಾಲಕರನ್ನು ಹೊಂದಿರುವ ರೂಪದರ್ಶಿ ಕ್ಲೇರ್ ಪಿ. ಥಾಮಸ್‌ಗೆ ವರ್ಕೌಟ್ ಸವಾಲೊಂದನ್ನು ಎಸೆದಿದ್ದರು. ಅದರ ಅನ್ವಯ, ಇಬ್ಬರೂ ಒಂದೇ ರೀತಿಯ ವರ್ಕೌಟ್‌ಗಳನ್ನು ಮಾಡಬೇಕಿತ್ತು. ಅದರಲ್ಲಿ ತಮ್ಮ ಸಾಮರ್ಥ್ಯ ಮತ್ತು ಎದುರಾಳಿಯ ದೌರ್ಬಲ್ಯವನ್ನೂ ಬಳಸಿಕೊಳ್ಳಬಹುದಾಗಿತ್ತು. ಪುಲ್‌ಅಪ್‌ನಿಂದ ರೋಪ್ ಕ್ಲೈಂಬಿಂಗ್‌ವರೆಗೆ ಇಬ್ಬರ ನಡುವೆ ಹಲವು ಸ್ಪರ್ಧೆಗಳು ಏರ್ಪಟ್ಟವು. ಅದರಲ್ಲಿ ಅಂತಿಮವಾಗಿ ರೂಪದರ್ಶಿ ಕ್ಲೇರ್ ಪಿ. ಥಾಮಸ್ ಅವರೇ ಗೆದ್ದರೆಂಬುದು ವಿಶೇಷ.

    ಇದನ್ನೂ ಓದಿ: ಬಿಬಿಸಿಯಲ್ಲಿ ಇನ್ನು ಜೆಫ್ರಿ ಬಾಯ್ಕಟ್ ಕಾಮೆಂಟರಿ ಕೇಳಲ್ಲ!

    ಒಲಿಂಪಿಯನ್ ಕ್ರೀಡಾಪಟುವಿನ ವಿರುದ್ಧ ಗೆಲುವು ದಾಖಲಿಸಿದ್ದಕ್ಕೆ ಅಚ್ಚರಿ ಪಡದ ಕ್ಲೇರ್ ಪಿ. ಥಾಮಸ್, ‘ನಾನೂ ಓರ್ವ ಅಥ್ಲೀಟ್. ಯಾವಾಗಲೂ ಅಥ್ಲೀಟ್‌ನಂತಿರುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಈ ವರ್ಕೌಟ್ ಚಾಲೆಂಜ್‌ನ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ 2 ಲಕ್ಷ ಜನರು ವೀಕ್ಷಿಸಿದ್ದು, ನೂರಾರು ಜನರು ಮೆಚ್ಚುಗೆಯ ಕಮೆಂಟ್‌ಗಳನ್ನು ಹಾಕಿದ್ದಾರೆ. ಇನ್ನು ಕೆಲವರು ಅಂತಿಮ ಫಲಿತಾಂಶದ ಬಗ್ಗೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.

    ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!

    ಇದನ್ನೂ ಓದಿ: ಎಂದೆಂದಿಗೂ ಆನಂದ್‌ ಅಭಿಮಾನಿಯಾಗಿರುವೆ ಎಂದು ಸಹ-ಪ್ರಯಾಣಿಕ ಹೇಳಿದ್ದೇಕೆ?

    ‘ಕ್ಲೇರ್ ಥಾಮಸ್ ವಿಶ್ವದ ಬಲಿಷ್ಠ ವ್ಯಕ್ತಿ. ನಮ್ಮಿಬ್ಬರಲ್ಲಿ ಯಾರು ಉತ್ತಮ ಎಂದು ತಿಳಿದುಕೊಳ್ಳುವುದಕ್ಕಾಗಿ ಈ ವಾರ ನಾವು ಹಲವು ಸವಾಲುಗಳಲ್ಲಿ ಭಾಗಿಯಾದೆವು. ಅದರಲ್ಲಿ ನಾನು ನಿರಾಸೆ ಅನುಭವಿಸುವಂತಾಯಿತು. ನಾನೂ ಕೂಡ ಕೆಲವು ಸ್ಪರ್ಧೆಗಳಲ್ಲಿ ಆಕೆಯನ್ನು ಸೋಲಿಸಿದೆ ಎಂಬುದನ್ನು ಹೇಳಲು ಹೆಮ್ಮೆ ಇದೆ’ ಎಂದು ನಿಕ್ ಸೈಮಂಡ್ಸ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts