More

    ಶುಗರ್ ಚೆಕ್‌ ಮಾಡಿಸಿಕೊಳ್ಳಲು ಬಂದಿದ್ದ ವೃದ್ಧ ಸಾವು; ವೈದ್ಯರ ನಿರ್ಲಕ್ಷ್ಯ ಎಂದ ಕುಟುಂಬಸ್ಥರು…

    ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಒಬ್ಬ ವಯೋವೃದ್ಧ ವ್ಯಕ್ತಿ ಶುಗರ್ ಚೆಕ್‌ ಮಾಡಿಸಿಕೊಳ್ಳಲು ಎಂದು ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಇವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಈ ವೇಳೆ ವೈದ್ಯರು ಸ್ವಂದಿಸಲಿಲ್ಲ ಎಂಬ ಆರೋಪ ಕೇಳಿಬಂದಿದ್ದು ಇದೇ ಕಾರಣಕ್ಕೆ ಚಿನ್ನಪ್ಪ ಮೃತರಾಗಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಬಡ ಜನ ಬಂದ್ರೆ ಸರಿಯಾಗಿ ಚಿಕಿತ್ಸೆ ಕೊಡಲ್ಲ ಅಂತ ಮೃತನ ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ತಮ್ಮ ಪರಿವಾರದ ಸದಸ್ಯನ ಸಾವಿನಿಂದ ಕಂಗೆಟ್ಟ ಕುಟುಂಬಸ್ಥರು ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಆಸ್ವತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ವೃದ್ಧರ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಘಟನೆಯಿಂದ ನೊಂದ ಕುಟುಂಬಸ್ಥರು ಆಸ್ವತ್ರೆಯಲ್ಲಿನ ಚೇರ್​ಗಳನ್ನ ಬಿಸಾಡಿದ್ದಾರೆ. ದೇವನಹಳ್ಳಿ ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿ ಘಟನೆ ನಡೆದಿದೆ.

    ಶಿಡ್ಲಘಟ್ಟ ಮೂಲದ ಚಿನ್ನಪ್ಪ( 61 ) ಮೃತ ವೃದ್ಧರಾಗಿದ್ದಾರೆ. ಇವರು ಬೆಳಗ್ಗೆ ಶುಗುರ್ ಚೆಕ್ಕಿಂಗ್ ಗೆ ಅಂತ ಆಸ್ಪತ್ರೆಗೆ ಬಂದಿದ್ದರು. ಕುಟುಂಬಸ್ಥರು, ಟಿಹೆಚ್ಒ ಸೇರಿದಂತೆ ಆಸ್ವತ್ರೆ ಸಿಬ್ಬಂದಿ‌ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಸರ್ಕಾರಿ ಆಸ್ವತ್ರೆಯಲ್ಲಿ ಮೃತನ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.

    ಅದೇ ಕುಟುಂಬದ ಮಹಿಳೆ ಒಬ್ಬರು ಆಸ್ಪತ್ರೆಯ ದಾಖಲಾತಿ ಪುಸ್ತಕ, ಪಿಠೋಪಕರಣಗಳನ್ನು ಬಿಸಾಡಿ ರಂಪಾಟ ಮಾಡಿದ್ದಾರೆ. ಜೊತೆಗೆ ಮೃತವ್ಯಕ್ತಿಯ ಶವ ಪರೀಕ್ಷೆ ಕೂಡ ಮಾಡಲು ಬಿಡಲ್ಲ ಎಂದು ರಂಪಾಟ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಮನವೊಲಿಸಲು ಹರಸಾಹಸ ಮಾಡಿದ್ದಾರೆ. ಈ ಸಂದರ್ಭ, ಆ ಮಹಿಳೆ ಪೊಲೀಸರ ವಿರುದ್ದವೂ ಮಹಿಳೆಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts