More

    ಬೆಳಗ್ಗೆ ಸಿಇಒ, ರಾತ್ರಿ ಓಲಾ ಕ್ಯಾಬ್ ಡ್ರೈವರ್ ; ಈ ವ್ಯಕ್ತಿ ಹಿಂದೆ ಇದೆ ರೋಚಕ ಕಥೆ..

    ಬೆಂಗಳೂರು: ಕಾಫಿಡೇ ಸಂಸ್ಥಾಪಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಅವರು ತಮ್ಮದೇ ಕಾಫಿಡೇ ಶಾಪ್​ವೊಂದಕ್ಕೆ ಹೋಗಿ ಕಾಫಿ ರುಚಿ ನೋಡಿ ಬರುತ್ತಿದ್ದರಂತೆ. ಅಮೆರಿಕ ಮೂಲದ ಉಬರ್‌ ಕಂಪನಿ ಉಬರ್‌ ಸಿಇಒ ದಾರಾ ಖೋಸ್ರೋಶಾಹಿ ಸಹ ಕೆಲ ತಿಂಗಳು ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡಿದ್ದರು. ಅಂಥವರ ಸಾಲಿಗೆ ಹೇಮಂತ್ ಬಕ್ಷಿ  ಕೂಡಾ ಸೆರ್ಪಡೆಯಾಗುತ್ತಾರೆ. ಕಂಪನಿಯೊಂದರ ಸಿಇಒ ಆಗಿರುವ ಹೇಮಂತ್ ಬಕ್ಷಿ ರಾತ್ರಿಯಲ್ಲಿ ಅವರದ್ದೇ ಕಂಪನಿಯಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಉನ್ನತ ಹುದ್ದೆಯಲ್ಲಿರುವ ಅವರು ಡ್ರೈವರ್ ಆಗಿ ಯಾಕೆ ಕೆಲಸ ಮಾಡುತ್ತಾರೆ? ಎನ್ನುವ ಪ್ರಶ್ನೆಗೆ ಬಕ್ಷಿ ಅವರು ಕೊಟ್ಟ ಕಾರಣ ವಿಭಿನ್ನವಾಗಿದೆ.

    ಹೇಮಂತ್ ಬಕ್ಷಿ ಓಲಾ ಕ್ಯಾಬ್ಸ್​ನ ಸಿಇಒ ಆಗಿ  ನೇಮಕವಾಗಿದ್ದಾರೆ. ಇಂಡೋನೇಷ್ಯಾದ ಯುನಿಲಿವರ್​ನಲ್ಲಿ ಈ ಮೊದಲು ಕೆಲಸ ಮಾಡಿದ್ದವರು. ಒಲಾ ಸಿಇಒ ಆಗಿದ್ದ ಭವೀಶ್ ಅಗರ್ವಾಲ್ ಸ್ಥಾನಕ್ಕೆ ಹೇಮಂತ್ ಬಕ್ಷಿ ಬಂದಿದ್ದಾರೆ. ಓಲಾ ಕ್ಯಾಬ್ಸ್‌ನ ಹೊಸದಾಗಿ ನೇಮಕಗೊಂಡ ಸಿಇಒ ಹೇಮಂತ್ ಬಕ್ಷಿ ಅವರು ಗ್ರಾಹಕರ ಅನುಭವ ಮತ್ತು ನಿರೀಕ್ಷೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ರಾತ್ರಿಯಲ್ಲಿ ಕ್ಯಾಬ್ ಡ್ರೈವರ್ ಆಗಿ ಮೂನ್‌ಲೈಟ್ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.

    ಓಲಾ ಕಂಪನಿಯು ಮೂರು ಘಟಕಗಳಾಗಿ ಮರುಸಂಘಟನೆಗೊಳ್ಳುತ್ತಿದೆ. ಕ್ಯಾಬ್‌ ಸೇವೆ ಮತ್ತು ಮೊಬಿಲಿಟಿ, ಹಣಕಾಸು ಸೇವೆಗಳು ಮತ್ತು ಲಾಜಿಸ್ಟಿಕ್‌ ಮತ್ತು ಇ-ಕಾಮರ್ಸ್‌ಗೆ ಸಂಬಂಧಿಸಿದಂತೆ ಓಲಾ ಮೂರು ಅಂಗಸಂಸ್ಥೆಗಳನ್ನು ಹೊಂದಿದೆ. ಓಲಾ ಸಂಸ್ಥಾಪಕರಾದ ಭವಿಶ್‌ ಅಗರ್ವಾಲ್‌ ಕಂಪನಿಯು ಕಾರ್ಯಾಚರಣೆಯನ್ನು ಸುಗಮಗೊಳಿಸುವ ಸಲುವಾಗಿ ಸಿಇಒ ಸ್ಥಾನವನ್ನು ತ್ಯಜಿಸಿದ್ದು, ಅವರ ಸ್ಥಾನಕ್ಕೆ ಬಕ್ಷಿ ನೇಮಕಗೊಂಡಿದ್ದಾರೆ. ಇಂಡೋನೇಷ್ಯಾದ ಯೂನಿಲಿವರ್‌ ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಬಕ್ಷಿ ಅವರಿಗಿದೆ. ಎಫ್‌ಎಂಸಿಜಿ ಕ್ಷೇತ್ರದಲ್ಲಿದ್ದ ಹೇಮಂತ್‌ ಬಕ್ಷಿ ಅವರಿಗೆ ಕ್ಯಾಬ್‌ ಕಂಪನಿಯ ಕೆಲಸ ಹೊಸತು.

    ಓಲಾ ಕ್ಯಾಬ್ಸ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು,  ಸಿಇಒ ಕೆಲಸವನ್ನು ಬಕ್ಷಿ ಮಾಡುತ್ತಾರೆ. ಜತೆಗೆ ವಾರಾಂತ್ಯದಲ್ಲಿ ರಾತ್ರಿ ವೇಳೆ ಕ್ಯಾಬ್‌ ಚಾಲಕರಾಗಿ ಕಾರ್ಯ ನಿರ್ವಹಿತ್ತಾರೆ. ಇದರಿಂದ ನನಗೆ ಗ್ರಾಹಕರ ಜತೆ ನೇರವಾಗಿ ವ್ಯವಹರಿಸಿದಂತೆ ಆಗುತ್ತದೆ. ಆಗ ನನಗೆ ಗ್ರಾಹಕ ಬೇಡಿಕೆ ಮತ್ತು ಅವರಿಗೆ ಇರುವ ಕಷ್ಟದ ಪರಿಚಯವಾಗುತ್ತದೆ ಹೀಗಾಗಿ ನಾನು ರಾತ್ರಿ ವೆಳೆ ಕ್ಯಾಬ್​ ಚಲಾಯಿಸುತ್ತಿದ್ದೇನೆ. ಹೊಸ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ಚಾಲಕರಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ ಹೇಮಂತ್‌ ಬಕ್ಷಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts