More

    3 ಪರ್ಸೆಂಟ್​ ಮೀಸಲಾತಿ ಪಡೆಯಲು ಒಕ್ಕಲಿಗರ‍್ಯಾರು ಭಿಕ್ಷುಕರಲ್ಲ: ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ

    ಹುಬ್ಬಳ್ಳಿ: ಒಕ್ಕಲಿಗರಿಗೆ ಕೇವಲ ಶೇ.3 ಮೀಸಲಾತಿ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಒಕ್ಕಲಿಗರು ಅಂದರೆ ಅನ್ನದಾತ. 3 ಪರ್ಸೆಂಟ್​ ಮೀಸಲಾತಿ ಪಡೆಯಲು ಒಕ್ಕಲಿಗರ‍್ಯಾರು ಭಿಕ್ಷುಕರಲ್ಲ. ಅವರಿಗೇನು ಮೀಸಲಾತಿ ಇದೆ ಅದನ್ನು ಕೊಡಲಿ. ಜನಸಂಖ್ಯಾ ಆಧಾರದ ಮೆಲೆ ಯಾರಿಗೆ ಏನು ಸಿಗಬೇಕೋ ಅದು ಸಿಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಆಗ್ರಹಿಸಿದ್ದಾರೆ.

    ಹುಬ್ಬಳ್ಳಿ ಮಾತನಾಡಿದ ಡಿಕೆಶಿ, ರಾಜ್ಯದ ಜನಸಂಖ್ಯೆಯಲ್ಲಿ ಒಕ್ಕಲಿಗರು ಶೇ.15-16ರಷ್ಟಿದ್ದು, ನಾವು ಶೇ.12 ಮೀಸಲಾತಿ ಕೇಳಿದ್ದೇವೆ. ಇದಕ್ಕಿಂತ ಕಡಿಮೆಯಾದರೆ ನಮ್ಮ ಸಮಾಜ ಹೋರಾಟ ಮಾಡುತ್ತದೆ. ಒಕ್ಕಲಿಗರಿಗೆ ಶೇ.3 ಮೀಸಲಾತಿ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಇದೆ. ನಮಗೆ ಭಿಕ್ಷೆ ಬೇಕಾಗಿಲ್ಲ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಲಿ. ಅಲ್ಪಸಂಖ್ಯಾತರು, ದಲಿತರ ಪಾಲನ್ನು ಕಸಿದು ಮೀಸಲಾತಿ ಕೊಡಿ ಎಂದು ನಾವು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಕರೊನಾ ನೆಪವೊಡ್ಡಿ ಜನರಲ್ಲಿ ಭಯ, ಭೀತಿ ಉಂಟು ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿವೆ. ವಿದೇಶದಿಂದ ಬರುವವರನ್ನು ತಡೆಯಲಿ. ಇಲ್ಲಿ ಇರುವ ಜನರನ್ನು ಹೆದರಿಸುವ ಪ್ರಯತ್ನ ಬೇಡ. ಏನೇ ನಿರ್ಬಂಧ ಹೇರಿದರೂ ನಾವು ಯಾತ್ರೆ ನಡೆಸುವವರೇ ಎಂದರು.

    ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ

    ಹೊಸ ವರ್ಷಕ್ಕೆ ಟೈಟ್ ರೂಲ್ಸ್: ಮತ್ತೆ ಮಾಸ್ಕ್ ಕಡ್ಡಾಯ; ಸಂಭ್ರಮಾಚರಣೆಗೆ ಮಾರ್ಗಸೂಚಿ

    ಪಂಚರತ್ನ ರಥಯಾತ್ರೆಗೆ ಆಗಮಿಸಿದ್ದವರಿಗೆ ಅಪಘಾತ: ಇಬ್ಬರ ಸ್ಥಿತಿ ಗಂಭೀರ, 10 ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts