More

    ಒಕ್ಕಲಿಗರಿಗೆ ಮೀಸಲಾತಿ ನೀಡದಿದ್ದಲ್ಲಿ ಹೋರಾಟ: ಶ್ರೀ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

    ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ನೀಡಿರುವ ಭರವಸೆಯಂತೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ತ್ವರಿತಗತಿಯ ತೀರ್ಮಾನವನ್ನು ಸರ್ಕಾರ ಕೈಗೊಳ್ಳದಿದ್ದಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಪೀಠದ ಪೀಠಾಧಿಪತಿ ಶ್ರೀ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

    ರಾಜ್ಯ ಒಕ್ಕಲಿಗರ ಸಂಘ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಎಸ್‌ಎಸ್‌ಎಲ್​ಸಿ ಪರೀಕ್ಷೆಯಲ್ಲಿ ಶೇ.98 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.95 ಅಂಕದೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಇದನ್ನೂ ಓದಿ: ನಾವ್ಯಾಕೆ ಮೋದಿ ಹೆಸರನ್ನು ಹೇಳುತ್ತಿರುತ್ತೇವೆ? ಮೋದಿಯವರ ಗುರಿ ಮುಂದಿನ ಚುನಾವಣೆಯಲ್ಲ: ಸಂಸದೆ ಶೋಭಾ ಕರಂದ್ಲಾಜೆ

    ಒಕ್ಕಲಿಗರ ಸಮುದಾಯಕ್ಕೆ 2ಸಿ ಮೀಸಲಾತಿಯಡಿ ಶೇ.7.5 ಮೀಸಲಾತಿ ನೀಡುವುದಾಗಿ ಸರ್ಕಾರ ಹೇಳಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಿ ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಮೀಸಲಾತಿ ಪ್ರಮಾಣ ಘೋಷಣೆ ಮಾಡಿರುವುದಕ್ಕಿಂತ ಇನ್ನಷ್ಟು ಹೆಚ್ಚಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

    ನಾಡಿನ ಮುತ್ಸದ್ದಿ ರಾಜಕಾರಣಿಗಳಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಈ ಸಂಘವು ಚುನಾವಣೆಯ ನಂತರ ಗೌರವಿಸಬೇಕು. ಈ ಇಬ್ಬರು ಗಣ್ಯರ ವ್ಯಕ್ತಿತ್ವಕ್ಕೆ ಯಾರೂ ಪರದೆ ಎಳೆಯಲಾಗದು. ಸೂರ್ಯನ ಬೆಳಕಿನಷ್ಟೇ ಅವರು ಮಾಡಿರುವ ಸೇವೆ ನಮ್ಮ ಕಣ್ಣು ಮುಂದಿದೆ ಎಂದು ಹೇಳಿದರು.

    ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿಐಟಿಗೆ ಈ ಬಾರಿ 28 ರ‌್ಯಾಂಕ್‌ಗಳು ಬಂದಿವೆ. ಇದರಲ್ಲಿ 25 ಚಿನ್ನದ ಪದಕಗಳು ದೊರೆತಿದ್ದು, ಮುರಳಿ ಎಂಬ ವಿದ್ಯಾರ್ಥಿ 18 ಚಿನ್ನದ ಪದಕ ಗಳಿಸಿ ವಿಶ್ವವಿದ್ಯಾಲಯದಲ್ಲಿ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
    | ಎಂ.ಪುಟ್ಟಸ್ವಾಮಿ, ಬಿಐಟಿ ಅಭಿವೃದ್ಧಿ ಸಮಿತಿ ಅಧ್ಯಕ್ಷ

    ಒಕ್ಕಲಿಗರಿಗೆ ಮೀಸಲಾತಿ ನೀಡದಿದ್ದಲ್ಲಿ ಹೋರಾಟ: ಶ್ರೀ ನಂಜಾವಧೂತ ಸ್ವಾಮೀಜಿ ಎಚ್ಚರಿಕೆಆದಿಚುಂಚನಗಿರಿ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗರ ಸಂಘವು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹಲವು ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ರಾಜ್ಯ, ರಾಷ್ಟ್ರ, ಜಾಗತಿಕ ಮಟ್ಟಕ್ಕೆ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಬೆಳೆಯಬೇಕು. ಹಣ ಅಧಿಕಾರ ಇತರೆ ಲಾಲಸೆಗಳಿಗೆ ಒಳಗಾಗದೆ, ದೇಶದ ಒಳಿತಿಗಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

    ಎಸ್‌ಎಸ್‌ಎಲ್​ಸಿ, ಪಿಯುಸಿ, ಎಂಸಿಎ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರ‌್ಯಾಂ ಮತ್ತು ಚಿನ್ನದ ಪದಕ ಪಡೆದ ಬಿಐಟಿಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

    ಇದನ್ನೂ ಓದಿ: ಈ ಬೇಸಿಗೆಯಲ್ಲಿ ವಿದ್ಯುತ್ ಕೈಕೊಡಲ್ಲ; ಲೋಡ್​ ಶೆಡ್ಡಿಂಗ್ ಮಾಡದಿರಲು ಎಲ್ಲ ಎಸ್ಕಾಮ್​ಗಳಿಂದ ಮಹತ್ವದ ನಿರ್ಧಾರ

    ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ., ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಆರ್.ಪ್ರಕಾಶ್, ಕಾರ್ಯಾಧ್ಯಕ್ಷ ಸಿ.ದೇವರಾಜು, ನಿರ್ದೇಶಕರಾದ ಎಂ.ಎಸ್.ಉಮಾಪತಿ, ಡಾ. ಟಿ.ಎಚ್.ಆಂಜನಪ್ಪ, ಡಾ. ವಿ.ನಾರಾಯಣಸ್ವಾಮಿ, ಅಶೋಕ್ ಎಚ್.ಎನ್., ಲೋಕೇಶ್ ಬಿ.ನಾಗರಾಜಯ್ಯ, ಜೆ.ರಾಜು, ಎನ್.ಬಾಲಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts