More

    ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ, ಒಕ್ಕಲಿಗ ಸ್ವಾಮೀಜಿ: ಜಮೀರ್ ಅಹ್ಮದ್

    ಹಾವೇರಿ: ಒಕ್ಕಲಿಗರ ವಿಚಾರವಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ರಾಜ್ಯದಲ್ಲಿ ವಿವಾದ ಎಬ್ಬಿಸಿದ್ದು, ಭಾರಿ ಪ್ರತಿರೋಧಕ್ಕೂ ಒಳಗಾಗಿದೆ. ಈ ಕುರಿತಾಗಿ ಒಕ್ಕಲಿಗ ರಾಜಕಾರಣಿಗಳು ಜಮೀರ್ ಅಹ್ಮದ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಆ ಬಗ್ಗೆ ಜಮೀರ್ ಪ್ರತಿಕ್ರಿಯೆ ನೀಡಿದ್ದಾರೆ.

    ಒಕ್ಕಲಿಗರ ಕುರಿತು ಮಾತನಾಡಿದ್ದಕ್ಕೆ ಸಚಿವ ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಇಂದು ಹಾವೇರಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

    ಆರ್. ಅಶೋಕ ಅವರದು ನಾನು ಬಿಡಿಸಿ ಹೇಳಲಾ? ಅಶೋಕ ಅವರಿಗೆ ಸಿಎಂ ಆಗೋ ಆಸೆ ಇಲ್ವಾ? ಅಶೋಕ, ಸಿ.ಟಿ.ರವಿಗೆ ಆಸೆ ಇಲ್ವಾ? ಅವರವರಲೇ ಪೈಪೋಟಿ ಇದೆ. ಸಿ.ಟಿ.ರವಿಗೆ ಹೇಳಿಕೊಳ್ಳಲು ವಿಷಯವಿಲ್ಲ. ಅವರಿಗೆ ಹಿಂದೂ-ಮುಸಲ್ಮಾನ ಯಾರೂ ಬೇಕಾಗಿಲ್ಲ. ಅವರಿಗೆ ಬೇಕಿರುವುದು ಕುರ್ಚಿ ಮತ್ತು ಅಧಿಕಾರ. ಬಿಜೆಪಿಯವರು ದೇಶವನ್ನು ಹಾಳು ಮಾಡುತ್ತಿದ್ದಾರೆ. ಈ ರೀತಿ ಮಾಡಿ ಅಧಿಕಾರಕ್ಕೆ ಬರುತ್ತಾರೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

    ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿರುವ ಜಮೀರ್ ಅಹ್ಮದ್, ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ, ಒಕ್ಕಲಿಗರ ಸ್ವಾಮೀಜಿ. ನಾನು ಬೆಳಗ್ಗೆಯಿಂದ ಸಂಜೆಯವರೆಗೆ ಆದಿಚುಂಚನಗಿರಿ ಮಠದಲ್ಲೇ ಬೆಳೆದಿರುವುದು. ಆದಿಚುಂಚನಗಿರಿ ಮಠದ ಸ್ವಾಮೀಜಿ ದಾರಿ ತೋರಿಸಿದರು, ಅವರ ಆದೇಶದ ಮೇರೆಗೆ ನಾನು ಜನತಾದಳಕ್ಕೆ ಹೋಗಿದ್ದು. ವಿಜಯನಗರ, ಚುಂಚನಗಿರಿ ಮಠದಲ್ಲಿ ಕೇಳಿ, ನನ್ನ ಸ್ವಾಮೀಜಿಗಳ ಸಂಬಂಧ ಏನು ಅಂತ ಹೇಳುತ್ತಾರೆ ಎಂದು ಜಮೀರ್ ತಿಳಿಸಿದ್ದಾರೆ.

    ದೇವೇಗೌಡರೇ ನನ್ನ ರಾಜಕೀಯ ಗುರು. 2005ರಲ್ಲಿ ನನ್ನ ಗೆಲ್ಲಿಸಿರುವುದು ದೇವೇಗೌಡರು. ನಾನು ಈ ಮಟ್ಟಕ್ಕೆ ಬೆಳೆದಿದ್ದು ದೇವೇಗೌಡರಿಂದ. ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ. ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನ ಗುರು. ನಾನು ಮಠಕ್ಕೆ ಹೋಗುವುದು ತಡವಾದರೆ ‘ಎಲ್ಲಿದ್ದೀಯಾ ಜಮೀರ್?’ ಅಂತ ಸ್ವಾಮೀಜಿ ಫೋನ್ ಮಾಡುತ್ತಿದ್ದರು ಎಂದು ಜಮೀರ್ ಹೇಳಿದ್ದಾರೆ.

    ಜಾತಿ ಕಾರಣಕ್ಕೆ ಪ್ರೇಮ ವೈಫಲ್ಯ; ‘ತುಂಬಾ ನೆನಪಾಗ್ತಿದಿಯ..’ ಅಂತ ಆಡಿಯೊ ಮೆಸೇಜ್ ಕಳಿಸಿ ನೇಣು ಹಾಕೊಂಡ ಯುವಕ..

    ಈಜುಕೊಳವೆಂದು ಎಸ್​ಟಿಪಿಗೆ ಧುಮುಕಿದ ವಿದ್ಯಾರ್ಥಿಗಳು; ಒಬ್ಬ ಸಾವು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts