More

    ಮೀಸಲಾತಿ ಹೆಚ್ಚಿಸಿ, ಪ್ರಾಧಿಕಾರ ರಚಿಸಿ, ನಮ್ಮ ಎಲ್ಲ ಉಪಜಾತಿಗಳನ್ನೂ ಒಬಿಸಿಗೆ ಸೇರಿಸಿ; ಒಕ್ಕಲಿಗರಿಂದ ಒಕ್ಕೊರಲ ಒತ್ತಾಯ

    ಬೆಂಗಳೂರು: ಒಕ್ಕಲಿಗ ಸಮುದಾಯದ ಹಿತ ರಕ್ಷಣೆಗೆ ಮೀಸಲಾತಿಯ ಹೆಚ್ಚಳ ಅನಿವಾರ್ಯವಾಗಿದೆ. ಜೊತೆಗೆ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚನೆ ತ್ವರಿತವಾಗಿ ಆಗಬೇಕು. ಈ ಸಂಬಂಧ ಅಧ್ಯಯನ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಬೇಕಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ತಿಳಿಸಿದ್ದಾರೆ. ಬುಧವಾರ ವಿಜಯನಗರದ ಆದಿಚುಂಚನಗಿರಿ ಶಾಖಾಮಠದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದ ಮೀಸಲಾತಿ ಹೆಚ್ಚಳ, ಒಕ್ಕಲಿಗರ ಪ್ರಾಧಿಕಾರ ರಚನೆ ಮತ್ತು ನಗರ ಪ್ರದೇಶದ ಬಡ ಒಕ್ಕಲಿಗರಿಗೆ ಒಬಿಸಿ ಅವಕಾಶಗಳ ಬಗ್ಗೆ ಚರ್ಚಿಸಲು ಏರ್ಪಡಿಸಿದ್ದ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಒಕ್ಕಲಿಗ ಸಮುದಾಯದ ಎಲ್ಲ 115 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಇದರಿಂದ ಅನೇಕ ಉಪಜಾತಿಗಳು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿವೆ. ಆದ್ದರಿಂದ ಈ ಎಲ್ಲ ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು. ಇದಕ್ಕಾಗಿಯೂ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ನಗರ ಪ್ರದೇಶದ ಒಕ್ಕಲಿಗ ಸಮುದಾಯವೂ ಸಂಕಷ್ಟದಲ್ಲಿದ್ದು, ಅವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಹಾಗಾಗಿ ಗ್ರಾಮೀಣ ಒಕ್ಕಲಿಗ ಮತ್ತು ನಗರ ಪ್ರದೇಶದ ಒಕ್ಕಲಿಗ ಎಂಬ ತಾರತಮ್ಯ ಇಲ್ಲದೆ ಎಲ್ಲ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಸಿಗಬೇಕಾಗಿದೆ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಒಕ್ಕಲಿಗ ಸಮುದಾಯವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಒಕ್ಕಲಿಗ ಜಾತಿಯಿಂದ ಉಪ ಜಾತಿಗಳು ಹೊರ ನಡೆದರೆ ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ಇಂತಹ ತಪ್ಪುಗಳನ್ನು ಸರಿಪಡಿಸಲು ಸಮುದಾಯದ ಮುಖಂಡರು ಕ್ರಮ ಕೈಗೊಳ್ಳಬೇಕು. ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮತ್ತು ಪ್ರಾಧಿಕಾರ ರಚನೆ ಆಗುವವರೆಗೆ ಹೋರಾಟ ನಡೆಸೋಣ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು. ಸಮುದಾಯದ ರಕ್ಷಣೆಯ ವಿಷಯದಲ್ಲಿ ಹಿಂದೆ ನಡೆದಿರುವ ಹೋರಾಟಗಳನ್ನು ಕುರಿತು ಸಭೆಗೆ ತಿಳಿಸಿದ ಗಣ್ಯರು,
    ಮುಂದಿನ ಹೋರಾಟದ ಕುರಿತ ರೂಪುರೇಷೆಗಳ ಬಗ್ಗೆ ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

    ಮೀಸಲಾತಿ ಹೆಚ್ಚಳ ಮಾಡಲು ಅವಕಾಶಗಳಿದ್ದು, ತಮಿಳುನಾಡಿನಲ್ಲಿ ಶೇ.69 ಮೀಸಲಾತಿ ನೀಡಿರುವ ಹಅಗೂ ಸಾಂವಿಧಾನಿಕ ಆಯಾಮಗಳ ಕುರಿತೂ ಚರ್ಚೆ ನಡೆಯಿತು. ಮೀಸಲಾತಿ ಹೆಚ್ಚಳ ವಿಷಯದಲ್ಲಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಸಭೆ ತೀರ್ಮಾನಿಸಿತು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಮಿತಿಗಳನ್ನು ರಚಿಸಲಾಯಿತು. ಸಭೆಯ ಒಮ್ಮತದ ತೀರ್ಮಾನದಂತೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಮತ್ತು ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಹೋರಾಟ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು. ವೈ.ಕೆ. ಪುಟ್ಟಸ್ವಾಮಿಗೌಡ, ಸಿ. ಚಿಕ್ಕಣ್ಣ, ಟಿ. ತಿಮ್ಮೇಗೌಡ, ಡಾ. ಎಚ್.ಎನ್. ಕೃಷ್ಣ, ಕೆ.ವಿ.ಆರ್. ಟಾಗೋರ್ ಅವರನ್ನು ಈ ಎರಡೂ ಸಮಿತಿಗಳ ಸದಸ್ಯರಾಗಿ ನೇಮಿಸಲಾಯಿತು. ಹೋರಾಟದ ರೂಪುರೇಷೆ ಮತ್ತು ಪ್ರಾಧಿಕಾರದ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಶಂಕರಲಿಂಗೇಗೌಡ, ಡಾ.ಎಚ್.ಎನ್. ಕೃಷ್ಣ, ಹಿ.ಚಿ. ಬೋರಲಿಂಗಯ್ಯ ಮತ್ತು ಪುಟ್ಟೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು! 

    ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ವೈ.ಕೆ. ಪುಟ್ಟಸ್ವಾಮಿಗೌಡ, ಶಂಕರಲಿಂಗೇಗೌಡ, ಟಿ. ತಿಮ್ಮೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್ ಟಾಗೋರ್, ನಿವೃತ್ತ ಐಎಫ್ಎಸ್ ಅಧಿಕಾರಿ ಶ್ರೀಕಂಠಯ್ಯ, ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಡಾ.ಎಚ್.ಎನ್. ಕೃಷ್ಣ, ಪತ್ರಿಕೋದ್ಯಮಿ ಟಿ.ವೆಂಕಟೇಶ್, ಸಾಹಿತಿಗಳಾದ ಎಲ್.ಎನ್. ಮುಕುಂದರಾಜ್, ಹಿ.ಚಿ. ಬೋರಲಿಂಗಯ್ಯ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ವಕೀಲ ಪುಟ್ಟೇಗೌಡ, ಆಡಿಟರ್ ನಾಗರಾಜ್ ಯಲಚವಾಡಿ, ತಲಕಾಡು ಚಿಕ್ಕರಂಗೆಗೌಡ ಮುಂತಾದವರಿದ್ದರು.

    ‘ಹೆಂಡತಿ ತಂಬಾಕು ತಿಂತಾಳೆ, ನಂಗೆ ಡಿವೋರ್ಸ್​ ಕೊಡಿಸಿ..’ ಗಂಡನ ಬೇಡಿಕೆಗೆ ಕೋರ್ಟ್​ ಹೇಳಿದ್ದೇನು?

    Video | ಸ್ಟೈಲ್​ಕಿಂಗ್​ ಚಾಯ್​ವಾಲಾ: ವೈರಲ್​ ಆಗಿದೆ ಈತನ ಕೈಚಳಕದ ಝಲಕ್​; ಈ ವಿಡಿಯೋ ನೋಡಿದ್ರೆ ಇಲ್ಲೊಮ್ಮೆ ಟೀ ಕುಡಿಯಬೇಕು ಅನಿಸಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts