More

    ತೈಲ ಬೆಲೆ ಏರಿಕೆಗೆ ವಿರೋಧ

    ಅಥಣಿ: ಇಂಧನ ದರ ಏರಿಕೆ ತಡೆಗಟ್ಟಲು ವಿಲವಾಗಿರುವ ಕೇಂದ್ರ ಸರ್ಕಾರದ ವೈಲ್ಯ ಖಂಡಿಸಿ ಅಥಣಿ ಬ್ಲಾಕ್ ಕಾಂಗ್ರೆಸ್‌ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟಿಸಿ, ಉಪತಹ ಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಶನಿವಾರ ಮನವಿ ಸಲ್ಲಿಸಿದರು.

    ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಅದರ ಲಾಭ ಭಾರತದ ಜನರಿಗೆ ಸಿಗುತ್ತಿಲ್ಲ. ನಿತ್ಯ ತೈಲ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನರನ್ನು ಸಮಸ್ಯೆಗೆ ಸಿಲುಕಿಸುತ್ತಿದೆ. ಕೇಂದ್ರ ಸರ್ಕಾರ ಶೀಘ್ರ ಹೆಚ್ಚಿರುವ ಇಂಧನ ದರ ಇಳಿಕೆ ಮಾಡಿ ಜನರಿಗೆ ನೆರವು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

    ನಂತರ ಪಕ್ಷದ ಕಾರ್ಯಕರ್ತರು ಉಭಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಮುಖಂಡರಾದ ಸದಾಶಿವ ಬುಟಾಳೆ, ಸತ್ಯಪ್ಪ ಬಾಗೆಣ್ಣವರ, ಬಸವರಾಜ ಬುಟಾಳಿ, ರಾವಸಾಬ ಜಕನೂರ, ಧರೆಪ್ಪ ಠಕ್ಕಣವರ, ಬಸವರಾಜ ಗುಮಟಿ, ಅನಿಲ ಸುಣದೋಳಿ, ಕಾರ್ಯಕರ್ತರಾದ ರಾವಸಾಬ ಐಹೊಳೆ, ಸಂಗಮೇಶ ಅಲಿಬಾದಿ, ಬೀರಪ್ಪ ಯಂಕಚ್ಚಿ, ಸುನಿತಾ ಐಹೊಳೆ, ರೇಖಾ ಪಾಟೀಲ, ಸುಜಾತಾ ಸನದಿ, ಎಂ.ಡಿ.ನಾಯಕ, ರಾಜು ಮದಬಾವಿ, ಕಪಿಲ ಘಟಕಾಂಬಳೆ, ಚಿದಾನಂದ ಮುಕಣಿ, ಸಂಗು ಆಜೂರ ಇದ್ದರು.

    ವಿಶೇಷ ರೀತಿಯಲ್ಲಿ ಪ್ರತಿಭಟನೆ: ಎತ್ತಿನ ಗಾಡಿಯಲ್ಲಿ ಮೋಟರ್ ಬೈಕ್ ಇಟ್ಟು ಪಟ್ಟಣದ ಮಿನಿವಿಧಾನಸೌಧದವರೆಗೆ ಚಕ್ಕಡಿ ಗಾಡಿಯಲ್ಲಿ ಆಗಮಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts