More

    ಮತದಾರರು ವಿವೇಚನೆಯಿಂದ ಮತ ಚಲಾಯಿಸಲಿ: ಸಾಹಿತಿಗಳು, ಹೋರಾಟಗಾರರಿಂದ ಮನವಿ

    ಮೈಸೂರು: ಈ ಸಲ ಲೋಕಸಭಾ ಚುನಾವಣೆ ಎಲ್ಲ ಚುನಾವಣೆಗಳಂತಲ್ಲ. ಇದು ಅತ್ಯಂತ ಬಿಕ್ಕಟ್ಟಿನ ಕಾಲದಲ್ಲಿ ನಡೆಯುತ್ತಿರುವ ಚುನಾವಣೆ. ಹಾಗೆಯೇ ಕೆಲವು ಮುಖ್ಯ ಸಂಗತಿಗಳನ್ನು ನಿರ್ಧರಿಸುವ ಚುನಾವಣೆಯಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಹಾಗೆಯೇ ವಿವೇಚನೆಯಿಂದ ತಮ್ಮ ಮತವನ್ನು ಚಲಾಯಿಸಬೇಕು ಎಂದು ಸಾಹಿತಿಗಳು, ಹೋರಾಟಗಾರರು ಪ್ರಕಟಣೆಯಲ್ಲಿ ಕೋರಿದ್ದಾರೆ


    ಈ ಚುನಾವಣೆ ಸ್ವಾತಂತ್ರ್ಯ ಮತ್ತು ಸರ್ವಾಧಿಕಾರದ ನಡುವೆ ನಡೆಯ್ತುತಿರುವ ಚುನಾವಣೆ. ಹಾಗೆಯೇ ಜಾತಿ, ಧರ್ಮದ ನಿರಪೇಕ್ಷೆ ಮತ್ತು ಕೋಮುವಾದಗಳ ನಡುವೆ ನಡೆಯುತ್ತಿರುವ ಚುನಾವಣೆಯೂ ಹೌದು. ನಮ್ಮ ನಿಮ್ಮೆಲ್ಲರ ವೋಟು ಈ ದೇಶದ ಗತಿಯನ್ನು ಬದಲಿಸುವ ಬಹುಮುಖ್ಯ ಸಾಧನವಾಗಿದೆ ಎಂದು ಹೇಳಿದ್ದಾರೆ.


    ನಮ್ಮ ಕಣ್ಮುಂದಿರುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸದೆ ಹೋದರೆ, ಕೋಮುಶಕ್ತಿಗಳು ವಿಜೃಂಭಿಸಿ ದೇಶ ದಿಕ್ಕು ತಪ್ಪಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಗಾಳಿಗೆ ತೂರಿಹೋಗುವ ಅಪಾಯ ಇದೆ.

    ಆದ್ದರಿಂದ ಈ ಹೊತ್ತಿನಲ್ಲಿ ನಾವೆಲ್ಲ ಗಂಭೀರವಾಗಿ ಚಿಂತಿಸಿ ಮತದಾನ ಮಾಡಬೇಕಾದದ್ದು ಅಗತ್ಯ ಕರ್ತವ್ಯ ಎಂದು ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ, ನ.ರತ್ನ, ಪ್ರೊ.ಬಿ.ಎನ್.ಶ್ರೀರಾಮ, ದೇವನೂರ ಮಹಾದೇವ, ಹಿ.ಶಿ.ರಾಮಚಂದ್ರೇಗೌಡ, ಚ.ಸರ್ವಮಂಗಳಾ, ಜಿ.ಪಿ. ಬಸವರಾಜು, ಪ್ರೊ.ಓ.ಎಲ್.ನಾಗಭೂಷಣ, ಪ್ರೊ.ಅರವಿಂದ ಮಾಲಗತ್ತಿ, ಸಬಿಹಾ ಭೂಮಿಗೌಡ, ಸುಶೀ ಬಸವಲಿಂಗಯ್ಯ, ಪಂಡಿತರಾಧ್ಯ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts