More

    ವಿದ್ಯಾನಗರಕ್ಕೆ ಭೇಟಿ ನೀಡಿದ ಅಧಿಕಾರಿಗಳು : ಸ್ವಚ್ಛತೆ ಕೈಗೊಳ್ಳಲು ಸಿಬ್ಬಂದಿಗೆ ಸೂಚನೆ

    ಸಿಂದಗಿ : ಪಟ್ಟಣದ ವಿದ್ಯಾನಗರಕ್ಕೆ ತಾಲೂಕು ಆರೋಗ್ಯಾಧಿಕಾರಿ ಆರ್.ಎಸ್. ಇಂಗಳೆ ಹಾಗೂ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಸ್ವಚ್ಛತೆ ಕೈಗೊಳ್ಳುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸಿದರು.

    ಈ ಬಡಾವಣೆಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂಬುದನ್ನು ಗಮನಿಸಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಚರ್ಚಿಸಿದರು.

    ಸೊಳ್ಳೆಗಳ ನಿಯಂತ್ರಣಕ್ಕೆ ಈಗಾಗಲೆ ವಾರ್ಡ್‌ನಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಅಲ್ಲದೇ ಪಟ್ಟಣ ಸ್ವಚ್ಛತೆಗೆ ಗಮನಹರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡುವಲ್ಲಿ ನಿವಾಸಿಗಳೂ ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ತಿಳಿಸಿದರು.

    ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಅಮಲಿಹಾಳ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ, ಗುಡುಲಾಲ್ ಬ್ಯಾಕೋಡ, ಉಮೇಶ ಕತ್ತಿ, ಪ್ರಲ್ಹಾದರಾವ್ ಕುಲಕರ್ಣಿ, ಕಲ್ಲಪ್ಪ ಚೌರ, ಪಿ.ವೈ.ಚೌಡಕಿ, ಪ್ರಭು ಜಂಗಿನಮಠ, ವೀರೇಂದ್ರ ಪವಾಡೆ, ಆಶಾ ಕಾರ್ಯಕರ್ತೆಯರಾದ ರಾಜಶ್ರೀ ಸಲಾದಹಳ್ಳಿ, ರೂಪಾ ಗಣಿಹಾರ ಇತರರಿದ್ದರು.

    ಗಮನ ಸೆಳೆದ ವರದಿ : ಸಿಂದಗಿ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಸ್ವಚ್ಛತೆ ಇಲ್ಲದೆ ನಿವಾಸಿಗಳು ಸೊಳ್ಳೆಯ ಕಾಟ, ರೋಗ ಭೀತಿ ಹೆಚ್ಚಾಗಿದೆ ಎಂಬುದರ ಕುರಿತು ‘ಚಿಕೂನ್ ಗುನ್ಯಾ, ಡೆಂಘೆ ಭೀತಿಯಲ್ಲಿ ಜನ!’ ಎಂಬ ಶೀರ್ಷಿಕೆಯಡಿ ಸೆ. 26ರಂದು ವಿಜಯವಾಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಾದ ಕೆಲವೇ ದಿನಗಳ ನಂತರ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ (ಆಡಳಿತ) ಸಿ.ಎ. ಹರಿದಾಸನ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಈ ಕುರಿತು ಪತ್ರ ಬರೆದು ವಿಜಯವಾಣಿ ವರದಿ ಬಗ್ಗೆ ಪ್ರಸ್ತಾಪಿಸಿ ಆದ್ಯತೆ ಮೇರೆಗೆ ಸಮಸ್ಯೆ ಬಗೆರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಈ ಆದೇಶದನ್ವಯ ಅಧಿಕಾರಿಗಳು ಮಂಗಳವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳ ಗಮನ ಸೆಳೆದ ಪತ್ರಿಕೆ ಕಾರ್ಯದ ಬಗ್ಗೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts