More

    ಎಚ್ಡಿಕೆ ತೋಟದ ಮನೆಯಲ್ಲಿ ಹೊಸತೊಡಕು ಅಧಿಕಾರಿಗಳಿಂದ ತಡೆ

    ರಾಮನಗರ: ಬಿಡದಿಯ ಕೇತಿಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಭರ್ಜರಿ ಬಾಡೂಟ ಆಯೋಜನೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.

    ಇಂದು ಯುಗಾದಿಯ ಹೊಸತೊಡಕು ಹಿನ್ನಲೆಯಲ್ಲಿ ಪಕ್ಷದ ಕೆಲ ನಾಯಕರು ಹಾಗೂ ಮುಖಂಡರಿಗೆ ಕುಮಾರಸ್ವಾಮಿ ಅವರು ಬಾಡೂಟ ಆಯೋಜನೆ ಮಾಡಿದ್ದರು. ಚುನಾವಣಾ ನೀತಿಸಂಹಿತೆ ಹಿನ್ನಲೆ ಬಾಡೂಟ ಆಯೋಜನೆಗಳಿಗೆ ಬ್ರೇಕ್ ಇದ್ರೂ ಕೂಡ ಬಾಡೂಟ ಆಯೋಜಿಸಿರುವ ಕಾರಣದಿಂದಾಗಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತಪಾಸಣೆಗಾಗಿ ತೆರಳಿದರು.

    ಗೇಟ್ ಓಪನ್ ಮಾಡದ ಸಿಬ್ಬಂದಿ: ಕುಮಾರಸ್ವಾಮಿ ಅವರ ಮನೆಯಲ್ಲಿ ಬಾಡೂಟ ಆಯೋಜನೆ ಹಿನ್ನೆಲೆಯಲ್ಲಿ ಎಂಸಿಸಿ ತಂಡ ಹಾಗೂ ಪೊಲೀಸರು ತೋಟಕ್ಕೆ ತೆರಳಿದ್ದರು. ಈ ವೇಳೆ ಗೇಟ್ ಬಂದ್ ಆಗಿತ್ತು ಗೇಟ್ ತೆರೆಯುವಂತೆ ಅಧಿಕಾರಿಗಳು ಸೂಚಿಸಿದ್ದರು ಒಳಗಿನ ಭದ್ರತಾ ಸಿಬ್ಬಂದಿಗಳು ಗೇಟ್ ಓಪನ್ ಮಾಡದೆ ಅಧಿಕಾರಿಗಳನ್ನ ಕೆಲ‌ಒತ್ತು ಸತಾಯಿಸಿದ ಘಟನೆ ನಡೆಯಿತು..

    ಊಟ ಬಂದ್: ಎಚ್.ಡಿ.ಕೆ ತೋಟದ ಮನೆಯಲ್ಲಿ ಚುನಾವಣಾ ನಿಯಮ ಮೀರಿ ಬಾಡೂಟ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ ವೇಳೆ 100 ರಿಂದ 150 ಮಂದಿಗೆ ಊಟ ಸಿದ್ದಪಡಿಸಲಾಗುತಿತ್ತು. ಚುನಾವಣಾ ನೀತಿಸಂಹಿತೆ ಜಾರಿ ಇರುವ ಕಾರಣದಿಂದಾಗಿ ಊಟ ಆಯೋಜನೆ ಮಾಡದಂತೆ ಚುನಾವಣಾಧಿಕಾರಿಗಳು ಸ್ಥಳದಲ್ಲಿದ್ದ ಆಯೋಜಕರಿಗೆ ತಾಕೀತು ಮಾಡಿ ಹೊರ ನಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts