More

    VIDEO| ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಕುಕ್ಕರ್​ ತೆರೆದ ಅಧಿಕಾರಿಗಳಿಗೆ ಕಾದಿತ್ತು ಅಚ್ಚರಿ!

    ಕಲ್ಲಿಕೋಟೆ: ಪ್ರಯಾಣಿಕರೊಬ್ಬರ ಬಳಿ ಸುಮಾರು 32.67 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನವನ್ನು ವಾಯು ಗುಪ್ತಚರ ಘಟಕ (ಎಐಯು)ದ ಅಧಿಕಾರಿಗಳು ಶನಿವಾರ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕಮಿಷನರೇಟ್ ಆಫ್​ ಕಸ್ಟಮ್ಸ್​ (ಪ್ರಿವೆಂಟಿವ್​) ಕೊಚ್ಚಿನ್​ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾಗಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಸೌದಿ ಅರೇಬಿಯಾದ ಜೆದ್ದಾಹ್​ದಿಂದ ಆಗಮಿಸಿದ ಪ್ರಯಾಣಿಕರೊಬ್ಬರ ಬಳಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನವನ್ನು ಪ್ರೆಶರ್​ ಕುಕ್ಕರ್​ನಲ್ಲಿ ಅಡಗಿಸಿ ಇಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts