More

    ಅಧಿಕೃತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಿ

    ಹುಕ್ಕೇರಿ: ರೈತರಿಗೆ ಗುಣಮಟ್ಟದ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ವಿದ್ಯುತ್ ಪರಿವರ್ತಕಗಳನ್ನು ಹೆಚ್ಚಿಸಲಾಗುತ್ತಿದೆ. ಅದಕ್ಕಾಗಿ ರೈತರು ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದಕ್ಕಿಂತ ಅಧಿಕೃತ ಸಂಪರ್ಕ ಪಡೆಯಬೇಕು ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ, ಉದ್ಯಮಿ ಪೃಥ್ವಿ ರಮೇಶ ಕತ್ತಿ ಹೇಳಿದ್ದಾರೆ.

    ತಾಲೂಕಿನ ಎಲಿಮುನ್ನೋಳಿ ಮತ್ತು ನೇರ್ಲಿ ಗ್ರಾಮಗಳಲ್ಲಿ ಬುಧವಾರ ಅಳವಡಿಸಿದ ವಿದ್ಯುತ್ ಪರಿವರ್ತಕಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಸಹಕಾರಿ ಸಂಘದಿಂದ ವಿತರಿಸುವ ವಿದ್ಯುತ್ ಅಕ್ರಮವಾಗಿ ಪಡೆದುಕೊಂಡಲ್ಲಿ ಸಂಘಕ್ಕೆ ಹಾನಿಯಾಗುತ್ತದೆ. ಜತೆಗೆ ರೈತರಿಗೆ ಗುಣಮಟ್ಟದ ವಿದ್ಯುತ್ ಕೂಡ ದೊರಕುವುದಿಲ್ಲ ಎಂದರು.

    ಪ್ರತಿಯೊಂದು ವಿದ್ಯುತ್ ಪರಿವರ್ತಕಗಳನ್ನು ಅವಶ್ಯಕತೆಗನುಗುಣವಾಗಿ ಅಳವಡಿಸಲಾಗುತ್ತದೆ. ಆದ್ದರಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಾಗ ಪರಿವರ್ತಕ ಹಾಳಾಗಿ ರೈತರಿಗೆ ವಿದ್ಯುತ್ ಕಡಿತವಾಗುತ್ತದೆ. ಹಾಗಾಗಿ ರೈತರು ಅಕ್ರಮ ಸಂಪರ್ಕ ಪಡೆದವರನ್ನು ಗುರುತಿಸಿ ಬುದ್ಧಿ ಹೇಳಬೇಕು ಎಂದರು.

    ಮುಂಬರುವ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ಇರುವ ವಿದ್ಯುತ್ ಪರಿವರ್ತಕಗಳ ಸಾಮರ್ಥ್ಯ ಮತ್ತು ಅದರಿಂದ ಸಂಪರ್ಕ ಹೊಂದಿರುವ ಪಂಪ್‌ಸೆಟ್‌ಗಳ ಪ್ರಮಾಣ ಪರಿಶೀಲಿಸುತ್ತೇವೆ. ಹೆಚ್ಚುವರಿ ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಪ್ರಮಾಣದ ಟಿಸಿ ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕೆ.ಬಿ.ಪಾಟೀಲ, ನಿರ್ದೇಶಕ ಬಸಗೌಡ ಮಗೆಣ್ಣವರ, ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ, ಎಪಿಎಂಸಿ ರಾಜ್ಯ ನಿರ್ದೇಶಕ ಪ್ರಶಾಂತ ಪಾಟೀಲ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ ಹೊಳೆಪ್ಪಗೋಳ, ಬಲರಾಮ ಬೋನಿ, ಅಣ್ಣಪ್ಪ ಹಿಟ್ಟಣಗಿ, ಭೀಮಗೌಡ ಗಿರಿಗೌಡನವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts