More

    ನ್ಯಾಯಾಲಯಕ್ಕೆ ವರದಿ ಹಿನ್ನೆಲೆಯಲ್ಲಿ ಬೈರಮಂಗಲ ಜಲಾಶಯಕ್ಕೆ ಅಧಿಕಾರಿಗಳ ಭೇಟಿ

    ಬಿಡದಿ: ಬೈರಮಂಗಲ ಜಲಾಶಯದ ಬಳಿ ನಿರ್ವಿುಸುತ್ತಿರುವ ಬೈಪಾಸ್ ಚಾನಲ್ ನಿರ್ಮಾಣ ಸಂಬಂಧ 2021ರ ಜ.21ರೊಳಗೆ ನ್ಯಾಯಾಲಯಕ್ಕೆ ವರದಿ ನೀಡಬೇಕಾಗಿರುವುದರಿಂದ ಕೋರ್ಟ್ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

    ಬೆಂಗಳೂರಿನಿಂದ ವೃಷಭಾವತಿ ನದಿಯಲ್ಲಿ ಬರುವ ಕಲುಷಿತ ನೀರು ಬೈರಮಂಗಲ ಕೆರೆಗೆ ಸೇರುತ್ತಿರುವುದರಿಂದ ಆ ಭಾಗದ ಜನ ರೋಗ ಮತ್ತು ಸೊಳ್ಳೆ ಕಾಟದಿಂದ ಬಳಲುತ್ತಿದ್ದರು. ಇದರಿಂದ ಜನರಿಗೆ ಮುಕ್ತಿ ಕೊಡಿಸಲು ಶಾಸಕ ಎ.ಮಂಜುನಾಥ್ ಸರ್ಕಾರದ ಗಮನ ಸೆಳೆದು ಕೆರೆಗೆ ಹರಿಯುವ ಕಲುಷಿತ ನೀರನ್ನು ಬೈಪಾಸ್ ಚಾನಲ್ ಮೂಲಕ ಕೆರೆಗೆ ಹರಿಯದಂತೆ ಮಾಡುವುದು ಹಾಗೂ ಶುದ್ಧೀಕರಿಸಿದ ನೀರನ್ನು ಕೆರೆಗೆ ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ಬೈಪಾಸ್ ಚಾನಲ್ ನಿರ್ವಣದಿಂದ ಕೆರೆಗೆ ಧಕ್ಕೆ ಉಂಟಾಗಲಿದೆ ಎಂದು ಸರ್ಕಾರೇತರ ಸಂಸ್ಥೆಯ ನಿರ್ಮಲಾ ಗೌಡ ಎಂಬುವವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ನ್ಯಾಯಾಲಯ ಅಧಿಕಾರಿಗಳನ್ನು ನೇಮಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಸತ್ಯಾಸತ್ಯತೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts