More

    ವ್ಯತ್ಯಾಸ ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

    ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿ ತಾಲೂಕಿನ ವಿವಿಧ ಸರ್ವೆ ನಂಬರ್​ಗಳ ಡಿನೋಟಿಫಿಕೇಶನ್​ನಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ತಿದ್ದುಪಡಿ ಮೂಲಕ ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಶಾಸಕ ಕೆ.ಬಿ.ಅಶೋಕ್​ನಾಯ್್ಕ ಅಧಿಕಾರಿಗಳಿಗೆ ಸೂಚಿಸಿದರು.

    ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕಿಗೆ ಸಂಬಂಧಿಸಿ ಸೋಮವಾರ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಸರ್ವೆ ನಂ.33, 34, 7, 32 ಸೇರಿ ಇತರೆ ಸರ್ವೆ ನಂಬರ್​ಗಳಲ್ಲಿ ಸಾಗುವಳಿ ಜಮೀನು ಬ್ಲಾಕ್ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿದೆ. ಖಾತೆ ಪಡೆದು ಸಾಗುವಳಿ ಮಾಡುತ್ತಿರುವ ಅರ್ಹರು ಈ ಬ್ಲಾಕ್​ನಲ್ಲಿ ಬಾರದಿರುವುದರಿಂದ ಜಮೀನು ಹಂಚಿಕೆ ಸರಿಯಾಗುತ್ತಿಲ್ಲ. ಹೀಗಾಗಿ ತಿದ್ದುಪಡಿ ಅವಶ್ಯಕ ಎಂದರು.

    ತಹಸೀಲ್ದಾರ್ ಡಾ. ನಾಗರಾಜ್ ಸಭೆಗೆ ಮಾಹಿತಿ ನೀಡಿ, ಡಿನೋಟಿಫಿಕೇಶನ್ ಮಾಡಿರುವ ಬ್ಲಾಕ್​ಗಳಲ್ಲಿ ಖಾತೆ ಇರುವ ಫಲಾನುಭವಿಗಳ ಜಮೀನು ಅರಣ್ಯ ಇಲಾಖೆಯದ್ದು ಎಂದು ತೋರಿಸಲಾಗುತ್ತಿದೆ. ಹೀಗಾಗಿ ಸಮಸ್ಯೆ ಜಟಿಲವಾಗುತ್ತಿದೆ. ದಾಖಲೆಗಳನ್ನು ಪರಿಶೀಲಿಸಿ ಈಗಾಗಲೇ ಡಿನೋಟಿಫೈ ಆಗಿರುವ ಬ್ಲಾಕ್​ಗಳಲ್ಲಿಯೇ ಜಮೀನು ನೀಡಬೇಕು. ಇಲ್ಲವಾದರೆ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

    ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ಮಾತನಾಡಿ, ಭೂಮಿ ಡಿನೋಟಿಫಿಕೇಶನ್ ಮಾಡಿ ಕೊಡುವುದು ಮಾತ್ರ ಅರಣ್ಯ ಇಲಾಖೆಯ ಜವಾಬ್ದಾರಿ. ದಾಖಲೆ ಪ್ರಕಾರ ಫಲಾನುಭವಿಗಳಿಗೆ ಜಮೀನು ಹಂಚಿಕೆ ಕಂದಾಯ ಇಲಾಖೆಗೆ ಸೇರಿದ್ದು. ಈಗಾಗಲೇ ಡಿನೋಟಿಫೀಕೇಶನ್ ಆಗಿರುವ ಭೂಮಿ ಸಾಗುವಳಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲವೆಂದರೆ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸಹುದು ಎಂದು ಅಭಿಪ್ರಾಯಪಟ್ಟರು. ರೈತ ಮುಖಂಡರಾದ ಸೂಡೂರು ಸುಧಾಕರ, ಕೆರೆಕೊಪ್ಪ ಶೇಖರಪ್ಪ, ರಾಮಚಂದ್ರ, ದ್ಯಾವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts