More

    UPSCಯಿಂದ ಆಯ್ಕೆಯಾದ ಅನೇಕ ಅಧಿಕಾರಿಗಳು ಡಕಾಯಿತರು! ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ

    ಬಾಲಸೋರ್: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ)ದಿಂದ ಆಯ್ಕೆಯಾದ ಅನೇಕ ಅಧಿಕಾರಿಗಳು ಡಕಾಯಿತರು ಎನ್ನುವ ಮೂಲಕ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಬಿಶ್ವೇಸ್ವರ್​ ತುಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಒಡಿಶಾದ ಬಾಲಸೋರ್ ಜಿಲ್ಲೆಯ ಬಲಿಪಾಲ್‌ನಲ್ಲಿರುವ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳು ಮತ್ತು ಜಲಶಕ್ತಿ ರಾಜ್ಯ ಸಚಿವ ಬಿಶ್ವೇಸ್ವರ್​ ತುಡು ಭಾಗವಹಿಸಿ ಮಾತನಾಡಿದರು.

    ಕೋಳಿ ಕಳ್ಳನಿಗೆ ಶಿಕ್ಷೆಯಾಗಬಹುದಾದರೂ, ಖನಿಜ ಮಾಫಿಯಾ ನಡೆಸುವ ಅಧಿಕಾರಿಯನ್ನು ಮುಟ್ಟಲು ಸಾಧ್ಯವಿಲ್ಲ, ಏಕೆಂದರೆ ಇಡೀ ವ್ಯವಸ್ಥೆಯು ಅವನನ್ನು ರಕ್ಷಿಸುತ್ತದೆ ಎಂದು ಬಿಶ್ವೇಸ್ವರ್​ ತುಡು ಆರೋಪಿಸಿದರು.

    ಇದನ್ನೂ ಓದಿ: ತ್ರಿಶೂಲ ಹಿಡಿದು ರಸ್ತೆಗಿಳಿದಿಲ್ಲವೆಂದರೆ ಮುಂದೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ: BJP ಮುಖಂಡ

    ಹಲವರು ಡಕಾಯಿತರು
    ಯುಪಿಎಸ್‌ಸಿ ಮೂಲಕ ನೇಮಕಗೊಂಡವರು ಅತ್ಯಂತ ಜ್ಞಾನವುಳ್ಳ ವ್ಯಕ್ತಿಗಳು ಮತ್ತು ಯಾವಾಗಲೂ ಉನ್ನತ ಹುದ್ದೆಗಳಲ್ಲಿರುತ್ತಾರೆ ಎಂಬ ಕಲ್ಪನೆ ನನಗಿತ್ತು. ಆದರೆ ಈಗ, ಅಲ್ಲಿಂದ ಅರ್ಹತೆ ಪಡೆದವರಲ್ಲಿ ಹೆಚ್ಚಿನವರು ಡಕಾಯಿತರು ಎಂದು ನಾನು ಭಾವಿಸುತ್ತೇನೆ. ಎಲ್ಲರು ಅದೇ ರೀತಿ ಎಂದು ನಾನು ಹೇಳುವುದಿಲ್ಲ. ಆದರೆ, ಅವರಲ್ಲಿ ಹಲವರು ಡಕಾಯಿತರು ಎಂದು ತುಡು ಪ್ರತಿಪಾದಿಸಿದರು.

    ಒಡಿಶಾದ ಸಂಸದರಾಗಿರುವ ತುಡು ಯುಪಿಎಸ್‌ಸಿ ಕಚೇರಿಯು ದೆಹಲಿಯಲ್ಲಿರುವ ಅವರ ನಿವಾಸದ ಹಿಂಭಾಗದಲ್ಲಿದೆ ಮತ್ತು ಆರಂಭದಲ್ಲಿ ಅವರು ಅದರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದರು ಆದರೆ ಅದು ಈಗ ಬದಲಾಗಿದೆ ಎಂದರು.

    ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕತೆ ಕೊರತೆ
    ಇಂತಹ ವಿದ್ಯಾವಂತರು ಇದ್ದರೂ ನಮ್ಮ ಸಮಾಜ ಏಕೆ ಭ್ರಷ್ಟಾಚಾರ ಮತ್ತು ಅನ್ಯಾಯದಲ್ಲಿ ಮುಳುಗಿದೆ? ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕತೆಯ ಕೊರತೆ. ನಮ್ಮಲ್ಲಿ ಆಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆ ಇದೆ ಎಂದು ತುಡು ಹೇಳಿದರು. (ಏಜೆನ್ಸೀಸ್​)

    ನೂರು ಕೋಟಿ ರೂ. ಕ್ಲಬ್ ಸೇರಿದ ಕರ್ನಾಟಕ ಚುನಾವಣಾ ಅಕ್ರಮ!

    ಬೆಂಗಳೂರಲ್ಲಿ ಅಮಾನವೀಯ ಘಟನೆ: ಕಳ್ಳತನ ಮಾಡಿದನೆಂದು 1 ವಾರ ಕೂಡಿಟ್ಟು ಹಲ್ಲೆ, ನರಳಿ ನರಳಿ ವ್ಯಕ್ತಿ ಸಾವು

    ಲಾಕ್​ಡೌನ್​ ಸುತ್ತ ‘ಉಂಡೆನಾಮ’; ಕೋಮಲ್​ ಹೊಸ ಚಿತ್ರದ ಟ್ರೇಲರ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts