More

    ಕೃಷಿಹೊಂಡ ನಿರ್ಮಾಣಕ್ಕೂ ಲಂಚ ಕೇಳಿದ ಅಧಿಕಾರಿ ಎಸಿಬಿ ಬಲೆಗೆ

    ಚಿಕ್ಕಮಗಳೂರು: ಕೃಷಿ ಹೊಂಡ ನಿರ್ಮಾಣಕ್ಕೆ ಮಂಜೂರಾದ ಬಿಲ್ ಪಾವತಿಗೆ ಫಲಾನುಭವಿಯೊಬ್ಬರಿಂದ 2750 ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಸಹಾಯಕ ಕೃಷಿ ಅಧಿಕಾರಿಯನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

    ಆಲ್ದೂರಿನ ಸಹಾಯಕ ಕೃಷಿ ಅಧಿಕಾರಿ ಡಿ.ಆರ್.ಬಿಜಾಪುರ ಬಂಧಿತ ಆರೋಪಿ. ಮಾಚಗೊಂಡನಹಳ್ಳಿಯ ಎಸ್.ಡಿ.ಕೃಷ್ಣಮೂರ್ತಿ ಎಂಬುವವರು ನೀಡಿದ ದೂರಿನ ಮೇರೆಗೆ ಎಸಿಬಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ ತೆಗೆಸಲು ಸತ್ತಿಹಳ್ಳಿ ಗ್ರಾಪಂ ಪಿಡಿಒ ಅವರು ಕೃಷ್ಣಮೂರ್ತಿ ಅವರನ್ನು ಫಲಾನುಭವಿಯಾಗಿ ಆರಿಸಿ ಬಿಲ್ ಮಂಜೂರು ಮಾಡಿದ್ದರು. ಈ ಸಂಬಂಧ ಹಣ ಬಿಡುಗಡೆಗೆ ಸಹಾಯಕ ಕೃಷಿ ಅಧಿಕಾರಿ ಬಿಜಾಪುರ 4500 ರೂ. ಲಂಚ ಕೇಳಿದ್ದರು. ಈಗಾಗಲೇ 1750 ರೂ. ಮೊದಲೇ ನೀಡಿದ್ದ ಕೃಷ್ಣಮೂರ್ತಿ, ಬಳಿಕ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಇಲ್ಲಿನ ರಾಮನಹಳ್ಳಿಯ ಪೆಟ್ರೋಲ್ ಬಂಕ್ ಬಳಿ ಉಳಿದ 2750 ರೂ. ಲಂಚ ಸ್ವೀಕರಿಸುತ್ತಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಸಿಬಿ ಡಿವೈಎಸ್​​ಪಿ ಎಚ್. ಕೃಷ್ಣಮೂರ್ತಿ, ವೃತ್ತ ನಿರೀಕ್ಷಕ ಎನ್. ಮಂಜುನಾಥ್, ಸಬ್‍ ಇನ್​ಸ್ಪೆಕ್ಟರ್​ ಹಾಲಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಕಚೇರಿಯಲ್ಲಿಯೇ ಕಿಸ್​ ಕೊಟ್ಟು ಕೆಲಸ ಕಳೆದುಕೊಂಡ ಕೊಪ್ಪಳ ತಹಶೀಲ್ದಾರ್​!

    ಟ್ರಯಾಂಗಲ್ ಲವ್ ಸ್ಟೋರಿ: ಸ್ನೇಹಿತನನ್ನೇ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಗ್ಯಾಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts