More

    ಕೆರೆ ತುಂಬಿಸುವ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ

    ಕುಷ್ಟಗಿ: ಮಳೆ-ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೆರೆ ತುಂಬಿಸುವ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

    ಕೆರೆ ತುಂಬಿಸುವ ಯೋಜನೆ ಅನುಷ್ಠಾನ ಕುರಿತು ಪಟ್ಟಣದ ಸರ್ಕೀಟ್ ಹೌಸ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಡಿ.4ರೊಳಗೆ ಯೋಜನೆ ಸಂಪೂರ್ಣ ಅನುಷ್ಠಾನವಾಗಬೇಕಿದೆ. ಪೈಪ್ ಸೋರಿಕೆ, ವಾಲ್ವ್ ತೆರೆದು ನೀರು ಪೋಲಾಗುವುದು ಅಲ್ಲಲ್ಲಿ ಕಂಡುಬರುತ್ತಿದೆ. ಎಲ್ಲವನ್ನೂ ಸರಿಪಡಿಸಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಎಂದು ಸೂಚಿಸಿದರು.

    ಪಹಣಿಯಲ್ಲಿ ಜಂಟಿ ಖಾತೆ ಹೊಂದಿರುವ ರೈತರಿಗೆ ಬೆಳೆ ಪರಿಹಾರ ನೀಡುವಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ. ಯೋಜನೆಗೆ ಜಮೀನು ನೀಡಿದ ರೈತನಿಗೆ ಪರಿಹಾರ ನೀಡಲು ಜಂಟಿ ಖಾತೆಯಲ್ಲಿರುವ ಉಳಿದ ರೈತರೂ ಸಹಮತಿ ಸೂಚಿಸಬೇಕಿದೆ. ಉಳಿದ ರೈತರು ತಗಾದೆ ತಗೆಯುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಿ ಎಂದು ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರಗೆ ಶಾಸಕರು ನಿರ್ದೇಶಿಸಿದರು. ಅಂತಹ ಗ್ರಾಮಗಳ ರೈತರ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು.

    ಕೃಷ್ಣಾ ಭಾಗ್ಯ ಜಲನಿಗಮ (ಕೆಬಿಜೆಎನ್‌ಎಲ್)ದ ಸಿಇಒ ಮಂಜುನಾಥ ಮಾತನಾಡಿ, ಯೋಜನೆಯಡಿ ತುಂಬಿಸಬೇಕಾದ 18 ಕೆರೆಗಳ ಪೈಕಿ ಹೂಲಗೇರಾ, ಕೊಡತಗೇರಾ, ಬೀಳಗಿ, ಕಬ್ಬರಗಿ, ಚಳಗೇರಾ ಹಾಗೂ ಶಾಖಾಪುರ ಕೆರೆಗಳಿಗೆ ನೀರು ಹರಿಸಬೇಕಿದೆ. ಡಿ.4ರೊಳಗೆ ಎಲ್ಲ ಕೆರೆಗಳನ್ನು ತುಂಬಿಸುವ ಉದ್ದೇಶ ಹೊಂದಲಾಗಿದೆ ಎಂದರು. ಕೆಬಿಜೆಎನ್‌ಎಲ್‌ನ ಇಇ ತಂಬಿದೊರೈ, ಕುಷ್ಟಗಿ ಉಪ ವಿಭಾಗದ ಎಇಇ ರಮೇಶ, ಹುನಗುಂದ ಉಪ ವಿಭಾಗದ ಎಇಇ ಅಮರೇಗೌಡ ಪಾಟೀಲ್, ಯಲಬುರ್ಗಾ ಉಪವಿಭಾಗದ ಎಇಇ ಚನ್ನಪ್ಪ ಹಾಗೂ ನಿಗಮದ ಅಧಿಕಾರಿಗಳು ಇದ್ದರು.

    ಸಭೇಲಿ ಬಿಜೆಪಿ ಅಧ್ಯಕ್ಷ ಭಾಗಿ?

    ಕೆರೆ ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳೊಂದಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಸಭೆ ನಡೆಸಿದರು. ಇದರಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಸಹ ಪಾಲ್ಗೊಂಡಿದ್ದರು. ಯೋಜನೆಯಡಿ ತಾಲೂಕಿನ ದೊಡ್ಡ ದೊಡ್ಡ ಕೆರೆಗಳನ್ನೇ ಕೈಬಿಡಲಾಗಿದೆ. ಕೆರೆ ಸುತ್ತಲಿನ ಗ್ರಾಮಸ್ಥರು ನಿತ್ಯ ಶಾಸಕರ ಮನೆ ಮುಂದೆ ಬಂದು ತಮ್ಮ ವ್ಯಾಪ್ತಿಯ ಕೆರೆಗಳನ್ನೂ ತುಂಬಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎಂದೆಲ್ಲ ಸಭೆ ಉದ್ದಕ್ಕೂ ಮಾತನಾಡಿದ್ದು ಅಚ್ಚರಿಯನ್ನುಂಟು ಮಾಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts