More

    ಮತದಾರರ ಪಟ್ಟಿ ಪರಿಷ್ಕರಣೆಗೆ ಆಗ್ರಹ

    ಕಡೂರು: ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಕೊಡದಿದ್ದಲ್ಲಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಚಿಕ್ಕಂಗಳ ಗ್ರಾಮಸ್ಥರು ಗ್ರಾಪಂ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಮ್ಮ ಭಾಗದ ಮತದಾರರ ಪಟ್ಟಿ ಸರಿಪಡಿಸಿಕೊಳ್ಳಲು ನೀಡಿದ 3 ತಿಂಗಳ ಒಳಗೆ ಚಿಕ್ಕಂಗಳ ಗ್ರಾಮದ ಗ್ರಾಮಸ್ಥರು ಸೆಪ್ಟೆಂಬರ್​ನಲ್ಲಿಯೇ ಗ್ರಾಪಂ ಬಿಎಲ್​ಒ ಮತ್ತು ಪಿಡಿಒಗೆ 165 ಮತದಾರರು ಅರ್ಜಿ ಸಲ್ಲಿಸಿದ್ದರು. ಗ್ರಾಮಲೆಕ್ಕಾಧಿಕಾರಿ ಮತ್ತು ಪಿಡಿಒ ಸರಿಯಾಗಿ ಸ್ಥಳ ಪರಿಶೀಲನೆ ನಡೆಸದೆ ಚುನಾವಣಾ ಇಲಾಖೆಗೆ ತಪ್ಪು ಮಾಹಿತಿ ನೀಡಿ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

    ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಳ್ಳಿಗನೂರು ಚೌಡಪ್ಪ ಮಾತನಾಡಿ, ಚಿಕ್ಕಂಗಳ ಗ್ರಾಮದ ದಲಿತರಿಗೆ 20 ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲದಂತಾಗುತ್ತಿದೆ. ಈ ಹಿಂದೆ 1983ರಲ್ಲಿ ಚಿಕ್ಕಂಗಳ ಮಂಡಲ ಪಂಚಾಯಿತಿ ಇದ್ದಾಗ ಮಾದಿಗ ಸಮುದಾಯ ಇದ್ದ ಕ್ಷೇತ್ರ 1ರಲ್ಲಿ ಸುಮಾರು 250 ಮತಗಳು ಭಾಗ 1ರಲ್ಲಿ ಇದ್ದವು. ಈ ವೇಳೆ ನಮ್ಮ ಸಮುದಾಯದವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಗುತ್ತಿತ್ತು ಎಂದರು.

    ಚುನಾವಣಾ ಇಲಾಖೆ ಚಿಕ್ಕಂಗಳ ಗ್ರಾಪಂ ಆದ ನಂತರ ಚಿಕ್ಕಂಗಳ ಗ್ರಾಮದ ಭಾಗದ ಸಂಖ್ಯೆ 1ರಲ್ಲಿ ಇದ್ದ 100 ಮತದಾರರನ್ನು ಭಾಗ 2ಕ್ಕೆ ಏಕಾಏಕಿ ಬದಲಾವಣೆ ಮಾಡಿದ್ದರಿಂದ ಈವರೆಗೂ ನಮ್ಮ ಜಾತಿಯ ಸದಸ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts