More

    ಅಧಿಕಾರಿಗಳಿಗೆ ಸಿಗಬಾರದು ಗ್ರಾಪಂ ಅನುದಾನ

    ಮೂಡಿಗೆರೆ: ಗ್ರಾಪಂಗೆ ಸದಸ್ಯರ ಸಂಖ್ಯೆಗನುಗುಣವಾಗಿ 2 ಕೋಟಿ ರೂಪಾಯಿಗಿಂತ ಅಧಿಕ ಅನುದಾನ ಬಿಡುಗಡೆ ಮಾಡಲು ಸರ್ಕಾರ ತಯಾರಿ ನಡೆಸಿದೆ. ಅನುದಾನ ಅಧಿಕಾರಿಗಳಿಗೆ ಸಿಗಲು ಬಿಡಬಾರದು. ಸದಸ್ಯರೇ ಅನುದಾನ ಹಂಚಿಕೆ ಮಾಡಬೇಕು. ಚುನಾವಣೆ ಬಹಿಷ್ಕರಿಸಿದರೆ ಅಧಿಕಾರಿಗಳ ಪಾಲಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

    ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುಂಕಸಾಲೆ ಗ್ರಾಮಸ್ಥರು ಕಸ್ತೂರಿ ರಂಗನ್ ವರದಿಯಲ್ಲಿ ಸೇರ್ಪಡೆಯಾಗಿರುವ ರೈತರ ಜಮೀನು ಹೊರಗಿಟ್ಟು ಪರಿಸರ ಸೂಕ್ಷ್ಮವಲಯವನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು. ರೈತರು ಆತಂಕಪಡಬಾರದು. ದಾರಿ ತಪ್ಪಿಸುವವರ ಮಾತು ಕೇಳಿ ಸರ್ಕಾರದ ವಿರುದ್ಧ ಸಿಡಿದೇಳುವುದು ಸರಿಯಲ್ಲ. ತೊಂದರೆಗೀಡಾದವರನ್ನು ಮಾರ್ಗ ಮಧ್ಯ ಬಿಟ್ಟು ಹೋಗುವ ಜಾಯಮಾನ ನಮ್ಮದಲ್ಲ. ರೈತರು ಧೃತಿಗೆಡಬೇಡಿ ಎಂದು ಹೇಳಿದರು.

    ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹುಲಿ ಯೋಜನೆಯಿಂದ ರೈತರು ಭಯಗೊಂಡಿದ್ದಾರೆ. ಹುಲಿ ಸೇರಿದಂತೆ ಕಾಡು ಪ್ರಾಣಿಗಳನ್ನು ಜನವಸತಿ ಪ್ರದೇಶದಲ್ಲಿ ಬಿಟ್ಟು ಜನರನ್ನು ಸಾಯಿಸಲು ಮುಂದಾಗುವ ವರದಿಯಿಂದ ಹೆದರಿ ಜನ ಬೀದಿಗೆ ಬಂದಿದ್ದಾರೆ. ಕಸ್ತೂರಿ ರಂಗನ್ ವರದಿ ಅಂಶಗಳನ್ನು ಬದಲಾಯಿಸಬೇಕು. ಆ ವರದಿಯಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ. ನಾನು ಅದನ್ನು ಓದಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts