More

    ಆರೋಗ್ಯದ ಕಾಳಜಿ ಅವಶ್ಯ

    ಮುನವಳ್ಳಿ: ಬಡಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉಪಯುಕ್ತವಾಗಿವೆೆ ಎಂದು ಸಹಕಾರಿ ಧುರೀಣ ಉಮೇಶ ಬಾಳಿ ಹೇಳಿದರು.

    ಪಟ್ಟಣದಲ್ಲಿ ಜೈಂಟ್ಸ್ ಗ್ರೂಪ್ ಆ್ ರಾಣಿ ಚನ್ನಮ್ಮ ಸಹೇಲಿ ಹಾಗೂ ಸವದತ್ತಿಯ ಶ್ರೀ ಶಿವಸಂಜೀವಿನಿ ಸೇವಾ ೌಂಡೇಷನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಜನರು ಆರೋಗ್ಯದ ಬಗ್ಗೆ ನಿರ್ಲಕ್ಷೃ ತೋರದೆ ಉಚಿತ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಡಾ.ಸವಿತಾ ಸಬನೀಸ್ ಮಾತನಾಡಿ, ಜನರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
    ಜೈಂಟ್ಸ್ ಗ್ರೂಪ್ ಆ್ ರಾಣಿ ಚನ್ನಮ್ಮ ಸಹೇಲಿ ಅಧ್ಯಕ್ಷೆ ಮಧುಮತಿ ಕಲಾಲ ಮಾತನಾಡಿ, ಗ್ರಾಮೀಣ ಬಡ ಜನರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, ಎಲ್ಲರೂ ಶಿಬಿರದ ಲಾಭ ಪಡೆಯಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಶಿಂದೋಗಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ಶ್ರೀಪಾದ ಸಬನೀಸ್, ಡಾ.ಮಂಜುನಾಥ ಬಾರಕೇರ, ಎಸ್.ಬಿ.ಹಿರಲಿಂಗನ್ನವರ, ಮೋಹನ ಸರ್ವಿ,ಬಾಳು ಹೊಸಮನಿ
    ಅವರನ್ನು ಸನ್ಮಾನಿಸಲಾಯಿತು.

    ಜೈಂಟ್ಸ್ ಗ್ರೂಪ್ ಅಧ್ಯಕ್ಷ ಶಿವಾಜಿ ಮಾನೆ, ಅನಿಲ ಕಿತ್ತೂರ, ನಿರ್ಮಲಾ ಗದ್ವಾಲ, ಸವಿತಾ ಬಾಳಿ, ಅನ್ನಪೂರ್ಣಾ ಲಂಬೂನವರ, ಎ.ಪಿ.ಲಂಬೂನವರ, ವಿಜಯಲಕ್ಷ್ಮೀ ಶೀಲವಂತ, ರಾಧಾ ಕುಲಕರ್ಣಿ, ಸುರೇಖಾ ಗೋಪಶೆಟ್ಟಿ, ಡಾ.ಕೃತಿಕಾ ಕಲಾಲ, ಸುಮಾ ರೇಣಕೆ, ಕೃಷ್ಣಾಬಾಯಿ ನಲಗೆ, ಪದ್ಮಾವತಿ ಪಾಟೀಲ, ಸುಜಾತಾ ಜಂಬಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts