More

    ಮಕ್ಕಳಿಗೆ ಬೀದಿ ನಾಯಿಗಳ ಜೊತೆಗೆ ಮದುವೆ; ಕಾರಣವೇನು ಗೊತ್ತಾ?

    ಒಡಿಶಾ: ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂಬ ಸ್ಥಳೀಯ ಮೂಢನಂಬಿಕೆಗೆ ಅನುಗುಣವಾಗಿ ಒಡಿಶಾದ ಬಾಲಸೋರ್ ಇಬ್ಬರು ಮಕ್ಕಳಿಗೆ ಬೀದಿ ನಾಯಿಗಳ ಜೊತೆಗೆ ಮದುವೆ ಮಾಡಲಾಗಿದೆ.

    ಒಡಿಶಾದ ಬಾಲಸೋರ್ ಜಿಲ್ಲೆಯ ಬಂಧ್‌ಸಾಹಿ ಗ್ರಾಮದ ಸಿಂಗ್​​ ಬುಡಕಟ್ಟು ಜನಾಂಗವು ಪೂರ್ವಜರ ಕಾಲದಿಂದಲೂ ಶ್ವಾನದೊಂದಿಗೆ ವಿವಾಹ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗಷ್ಟೇ 11 ವರ್ಷದ ತಪನ್ ಸಿಂಗ್ ಎಂಬ ಬಾಲಕನಿಗೆ ಹೆಣ್ಣು ಶ್ವಾನದೊಂದಿಗೆ ಹಾಗೂ 7 ವರ್ಷದ ಲಕ್ಷ್ಮಿ ಎಂಬ ಬಾಲಕಿಗೆ ಗಂಡು ಶ್ವಾನದೊಂದಿಗೆ ವಿವಾಹ ನಡೆದಿದೆ.

    ಇದನ್ನೂ ಓದಿ: ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ನಟಿ ಐಶ್ವರ್ಯಾ ಪುತ್ರಿ ಆರಾಧ್ಯ!
    ಈ ಪದ್ಧತಿಗೆ ಕಾರಣ?: ಮಕ್ಕಳು ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿದ್ದಂತೆ ಅವರ ಮೇಲೆ ಯಾವುದೇ ಕೆಟ್ಟ ಶಕ್ತಿಗಳು ಬೀಳಬಾರದು ಎಂಬ ಕಾರಣಕ್ಕೆ ಶ್ವಾನಗಳೊಂದಿಗೆ ವಿವಾಹ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ. ಮಕ್ಕಳನ್ನು ದುಷ್ಟ ಶಕ್ತಿಯಿಂದ ದೂರಮಾಡಲು ಶ್ವಾನಗಳೊಂದಿಗೆ ವಿವಾಹ ಮಾಡಲಾಗುತ್ತದೆ. ಈ ರೀತಿ ಮದುವೆ ಮಾಡಿಸುವುದರಿಂದ ಮಕ್ಕಳ ಮೇಲೆ ಬೀಳುವ ದುಷ್ಟ ಶಕ್ತಿಗಳು ಪ್ರಾಣಿಯ ಮೇಲೆ ಬೀಳುತ್ತದೆ ಎಂದು ಈ ಬುಡಕಟ್ಟು ಜನಾಂಗದ ಜನರು ನಂಬುತ್ತಾರೆ.

    ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ: ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts