More

    ಅಂತರ್ಜಾತೀಯ ಮದುವೆ ಆದ್ರೆ ಎರಡು ತಿಂಗಳೊಳಗೆ ದಂಪತಿಯ ಖಾತೆಗೆ 2.5 ಲಕ್ಷ ರೂಪಾಯಿ ಜಮೆ!

    ಭುವನೇಶ್ವರ: ಅಂತರ್ಜಾತೀಯ ವಿವಾಹವಾದವರಿಗೆ ನೀಡುವ ಪ್ರೋತ್ಸಾಹಧನವನ್ನು ಒಂದು ಲಕ್ಷ ರೂಪಾಯಿಯಿಂದ 2.5 ಲಕ್ಷ ರೂಪಾಯಿಗೆ ಒಡಿಶಾ ಸರ್ಕಾರ ಏರಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿ ಒಂದು ವೆಬ್​ಸೈಟ್ ಅನ್ನೂ ಶುರುಮಾಡಿರುವ ಸರ್ಕಾರ, ದಂಪತಿ ಅರ್ಜಿ ಸಲ್ಲಿಸಿದ 60 ದಿನದೊಳಗೆ ಅವರ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಿದೆ.

    ರಾಜ್ಯ ಎಸ್​ಟಿ, ಎಸ್​ಸಿ ಡೆವಲಪ್​ಮೆಂಟ್​, ಮೈನಾರಿಟೀಸ್ ಆ್ಯಂಡ್ ಬ್ಯಾಕ್​ವರ್ಡ್ ಕ್ಲಾಸಸ್ ವೆಲ್​​ಫೇರ್ ಡಿಪಾರ್ಟ್​ಮೆಂಟ್ ಸುಮಂಗಲ ಎಂಬ ಹೆಸರಿನ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಏಕ ಕಂತಿನ ಈ ಪ್ರೋತ್ಸಾಹ ಧನ ಪಡೆಯುವುದಕ್ಕಾಗಿ ಮೇಲ್ವರ್ಗದ ಹಿಂದುಗಳು ಪರಿಶಿಷ್ಟ ಜಾತಿಯವರನ್ನು ವಿವಾಹವಾಗಬೇಕು. ಈ ವಿವಾಹವು 1955ರ ಹಿಂದು ವಿವಾಹ ಕಾನೂನಿನ ಪ್ರಕಾರ ಮಾನ್ಯತೆ ಹೊಂದಿರಬೇಕು. ಪತಿ ಅಥವಾ ಪತ್ನಿ ಯಾರಾದರೊಬ್ಬರು ಸಂವಿಧಾನದ ಅನುಚ್ಛೇದ 341ರ ಪ್ರಕಾರ ವ್ಯಾಖ್ಯಾನಿಸಿರುವ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.

    ಇದನ್ನೂ ಓದಿ: ‘ನಾನು ಸಿಎಂ ಆಗೋದು ಗ್ಯಾರೆಂಟಿ, ಬಿಎಸ್ವೈ ಅವಧಿ ನಂತ್ರವೋ ಮಧ್ಯದಲ್ಲೋ ಗೊತ್ತಿಲ್ಲ’ ಅಂದಿದ್ರು ಯತ್ನಾಳ್​!

    ಮೊದಲ ಸಲ ವಿವಾಹವಾಗುತ್ತಿರುವವರಿಗೆ ಈ ಪ್ರೋತ್ಸಾಹ ಧನ ನೀಡಲಾಗುತ್ತಿದೆಯಾದರೂ, ವಧು ವಿಧವೆ ಅಥವಾ ವರ ವಿದುರನಾಗಿದ್ದರೂ ಈ ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 2017ರ ಆಗಸ್ಟ್​ನಲ್ಲಿ ಈ ಪ್ರೋತ್ಸಾಹ ಧನವನ್ನು 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಕಳೆದ ವರ್ಷ ಒಡಿಶಾದಲ್ಲಿ 658 ಅಂತರ್ಜಾತೀಯವ ವಿವಾಹವಾಗಿದೆ. (ಏಜೆನ್ಸೀಸ್)

    ‘ನೆನಪಿರಲಿ ಫಸ್ಟ್ ವೋಟ್, ನಂತರ ರಿಫ್ರೆಶ್​ಮೆಂಟ್​!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts