More

    ಕರೊನಾ ಟೆಸ್ಟ್‌ಗೆ ಒಳಗಾಗಲು ಒಲ್ಲೆ ಎನ್ನುತ್ತಿದ್ದಾರೆ ದಸರಾ ಆನೆಗಳ ಮಾವುತರು!

    ಬೆಂಗಳೂರು: ರಾಜ್ಯದಾದ್ಯಂತ ದಿನೇದಿನೆ ಕರೊನಾ ಸೋಂಕು ಹರಡುತ್ತಿರುವುದರ ವೇಗ ಹೆಚ್ಚಾಗುತ್ತಿದೆ. ಅದರ ಬಗ್ಗೆ ರಾಜ್ಯ ಸರ್ಕಾರ ಚಿಂತಿತವಾಗಿರುವ ನಡುವೆಯೇ, ಅದರ ಆತಂಕವನ್ನು ಹೆಚ್ಚಿಸುವಂತಹ ಇನ್ನೊಂದು ಸುದ್ದಿ ಮೈಸೂರಿನಿಂದ ಬಂದಿದೆ.

    ಸಾಂಸ್ಕೃತಿಕ ರಾಜಧಾನಿಯಲ್ಲಿ ಈ ತಿಂಗಳು ದಸರಾ ಮಹೋತ್ಸವ ನಡೆಯಲಿದೆ. ಉತ್ಸವವನ್ನು ಸರಳವಾಗಿ ನಡೆಸಲು ಸರ್ಕಾರ ನಿರ್ಧರಿಸಿದ್ದರೂ, ಆನೆಗಳನ್ನು ಕಾಡಿನಿಂದ ಕರೆಸಿ ಸಿಂಗರಿಸಿ ಜಂಬೂಸವಾರಿಯನ್ನಂತೂ ಮಾಡಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆನೆಗಳ ಜತೆ ಬಂದಿರುವ ಮಾವುತರು, ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿರುವುದು ಇದೀಗ ಅಧಿಕಾರಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಮೈಸೂರಿಗೆ ಬರುತ್ತಿದ್ದಂತೆಯೇ ಮಾವುತರು ಮತ್ತು ಕಾವಾಡಿಗಳಿಗೆ ಕರೊನಾ ಟೆಸ್ಟ್ ನಡೆಸುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಟೆಸ್ಟ್ ಮಾಡಲು ಹೋದ ಸಿಬ್ಬಂದಿ ಜತೆ ಮಾವುತರು ವಾಗ್ವಾದಕ್ಕೆ ಇಳಿದಿದ್ದಾರೆ. ಇದು ಕಡ್ಡಾಯ ಎಂದು ಹೇಳಿದರೂ ಕೇಳಿಲ್ಲ. ‘‘ನಮಗೇನಾದರೂ ಜ್ವರ, ಕೆಮ್ಮು, ಶೀತ ಆಗಿದ್ದರೆ ಟೆಸ್ಟ್ ಮಾಡಿಸಬಹುದಿತ್ತು. ನಾವು ಆರಾಮಾಗಿಯೇ ಇದ್ದೇವೆ, ನಮಗ್ಯಾಕೆ ಟೆಸ್ಟ್ ಮಾಡ್ತೀರಾ ಸ್ವಾಮೀ? ಅಕಸ್ಮಾತ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಏನು ಗತಿ? ಆಗ ನಮ್ಮನ್ನು ವಾಪಸ್ ಕಳಿಸುತ್ತೀರಾ? ಅಥವಾ ಆಸ್ಪತ್ರೆಯಲ್ಲಿ ಕೂಡಿ ಹಾಕುತ್ತೀರಾ?’’ ಎಂದು ತರಹೇವಾರಿ ಪ್ರಶ್ನೆಗಳನ್ನು ಕಾವಾಡಿಗಳು ಮತ್ತು ಮಾವುತರು ಕೇಳುತ್ತಿದ್ದಾರೆ.

    ಕರೊನಾ ಟೆಸ್ಟ್‌ಗೆ ಒಳಗಾಗಲು ಒಲ್ಲೆ ಎನ್ನುತ್ತಿದ್ದಾರೆ ದಸರಾ ಆನೆಗಳ ಮಾವುತರು!

    ‘‘ನಾವು ಕಾಡಿನಲ್ಲಿರುವವರು. ನಮಗೆ ಕರೊನಾ-ಗಿರೋನಾ ಯಾವುದೂ ಬರುವುದಿಲ್ಲ’’ ಎಂದು ಹಠ ಮಾಡುತ್ತಿದ್ದಾರೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರು ಮುಟ್ಟಿಸಿದ್ದು, ಮಾವುತರ, ಕಾವಾಡಿಗಳ ಮನವೊಲಿಸಿ ಟೆಸ್ಟ್ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯಕ್ಕೆ 12 ಜನ ಮಾತ್ರ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts