More

    ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ

    ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
    ಶಾಲೆಗಳಲ್ಲಿ ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿದರೆ ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಸೇಟ್ ಹೇಳಿದರು.
    ಸೂಲಿಬೆಲೆ ನ್ಯೂ ಅಕ್ಸ್‌ರ್ಡ್ ಇಂಗ್ಲಿಷ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ, ಕ್ರೀಡೆ, ಮನರಂಜನೆ ಹಾಗೂ ಸಹಪಠ್ಯ ಚಟುವಟಿಕೆಗಳಿಂದ ಜ್ಞಾನ ವೃದ್ಧಿಸುವ ಜತೆಗೆ ಸಂತೆಯಂತಹ ಕ್ರಿಯಾತ್ಮಕ ಚಟುವಟಿಕೆಗಳಿಂದ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ ಎಂದರು.
    ಶಾಲೆ ಅಧ್ಯಕ್ಷೆ ಸುಮಲತಾ ಮಾತನಾಡಿ, ಮಕ್ಕಳ ಬೌದ್ಧಿಕ ಜ್ಞಾನದ ವಿಕಸನಕ್ಕಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
    ಶಾಲಾಉಪಾಧ್ಯಕ್ಷ ಜಿ.ಎಂ.ಶಿವಕುಮಾರ್, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಸಹ ಶಿಕ್ಷಕರಾದ ಮನುಜಾ, ನಾರಾಯಣಸ್ವಾಮಿ, ಲಕ್ಷ್ಮೀ, ಗಗನಾ, ಸಹನಾ, ಸಹಿಸ್ತಾ ಪಿರ‌್ದೋಸ್, ಮಂಜುಳಾ, ವೈಷ್ಣವಿ, ಸೌಂದರ್ಯ, ಯಶಸ್ವಿನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts