More

    ನ್ಯಾಮತಿಯಲ್ಲಿ ವಿಶೇಷ ಪಡಿ ಪೂಜೆ

    ನ್ಯಾಮತಿ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಗುರುವಾರ ಆರುಂಡಿ ಮಹೇಶ್ ಆಚಾರ್ 18ನೇ ವರ್ಷದ ಶಬರಿಮಲೆ ಯಾತ್ರೆ ಅಂಗವಾಗಿ ರಾತ್ರಿ ವಿಶೇಷ ಪಡಿ ಪೂಜೆ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

    ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಗುರುವಾರ ಸಂಜೆಯಿಂದ ನೂರಾರು ಭಕ್ತರ, ಮಾಲಾಧಾರಿಗಳ ಸಮ್ಮುಖದಲ್ಲಿ ಕರ್ಪೂರದಾರತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

    ಪಡಿ ಪೂಜೆಯಲ್ಲಿ ಹುಬ್ಬಳ್ಳಿ ಗೋಕುಲ ಅಯ್ಯಪ್ಪ ಸ್ವಾಮಿ ದೇಗುಲದ ಮೋಹನ್ ಗುರುಸ್ವಾಮಿ, ಕಡೂರು ಅಯ್ಯಪ್ಪ ಸ್ವಾಮಿ ದೇಗುಲದ ಭದ್ರರಾಜ ಗುರುಸ್ವಾಮಿ ಪುರೋಹಿತ್ಯದಲ್ಲಿ ಪದ್ಮಶ್ರೀ ಡಾ. ನಾಡೋಜ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನೇತೃತ್ವದಲ್ಲಿ ರಾತ್ರಿ ಅಯ್ಯಪ್ಪ ಸ್ವಾಮಿ ಭಜನೆ ಮಾಡುವ ಮೂಲಕ ಪಡಿ (18 ಮೆಟ್ಟಿಲುಗಳ) ಪೂಜೆ ನಡೆಸಲಾಯಿತು.

    ಭಾರತೀಯ ಅಯ್ಯಪ್ಪ ಸೇವಾ ಸಂಘ ಪದಾಧಿಕಾರಿಗಳಾದ ಶಿವಾನಂದ್ ಬಾರ್ಕಿ ಸ್ವಾಮಿ, ಉಮೇಶ್‌ಬಳ್ಳೂರು, ಶ್ರೀನಿವಾಸ್ ಸ್ವಾಮಿ, ರಾಜಕುಮಾರ್ ಲಕ್ಷ್ಮೇಶ್ವರ, ರಾಮಸ್ವಾಮಿ ಕರಂಡೆ ಬಿಜಾಪುರ, ಬಸವರಾಜ್ ವನೂರ, ಮಾರುತಿ ಕೋಳಿ ಬೆಳಗಾಂ, ಲಕ್ಷ್ಮಣ್ ಅಜ್ಜಲ್‌ಪುರ್, ಬಾಗಲಕೋಟೆ ಮುತ್ತುಸ್ವಾಮಿ, ಯೋಗೇಂದ್ರ ಸ್ವಾಮಿ ದಾವಣಗೆರೆ, ರವಿ ಸ್ವಾಮಿ ಬೈಲಹೊಂಗಲ, ಎಸ್.ಟಿ. ಶಿವ ಗುರುಸ್ವಾಮಿ, ಕೃಷ್ಣಸ್ವಾಮಿ ಹಾಗೂ ಪ್ರಧಾನ ಗುರುಸ್ವಾಮಿಗಳು ಯಲ್ಲಪ್ಪ ರೆಡ್ಡಿ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಶಿವರಾಜು ಸ್ವಾಮಿ, ಆರುಂಡಿ ಮಹೇಶ್ ಆಚಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts