More

    ಜ.8ರವರೆಗೆ ಮುಷ್ಠಿ ಅಕ್ಕಿ ಸಂಗ್ರಹ ಅಭಿಯಾನ

    ಶಿವಮೊಗ್ಗ: ಶಬರಿಮಲೆಗೆ ತೆರಳುವ ಭಕ್ತರಿಗೆ ಊಟೋಪಚಾರಕ್ಕೆ ಅನುಕೂಲವಾಗುವಂತೆ ಅಕ್ಕಿ ಹಾಗೂ ದಿನಸಿ ಪದಾರ್ಥವನ್ನು ಕಳುಹಿಸಿಕೊಡಲಾಗುತ್ತದೆ. ಕಳೆದ ವರ್ಷ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂನಿಂದ ನಾಲ್ಕು ಟನ್ ದಿನಸಿ ಸಾಮಗ್ರಿಗಳನ್ನು ಕಳುಹಿಸಲಾಗಿತ್ತು. ಈ ವರ್ಷವೂ ಮುಷ್ಠಿ ಅಕ್ಕಿ ಹಾಗೂ ದಿನಸಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಗುರುವಾರ ರಾಮಣ್ಣ ಶ್ರೇಷ್ಠಿ ಪಾರ್ಕ್ ಪ್ರದೇಶದಲ್ಲಿ ಮುಷ್ಠಿ ಅಕ್ಕಿ ಸಂಗ್ರಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದ ಅಭಿಯಾನದಲ್ಲಿ ಇದುವರೆಗೆ 45 ಕ್ವಿಂಟಾಲ್ ಅಕ್ಕಿ ಸಂಗ್ರಹಿಸಿದ್ದೇವೆ. ಜ.8ರವರೆಗೂ ಈ ಅಭಿಯಾನ ನಡೆಯಲಿದೆ. ಅಂದು ಸಂಜೆ 6ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಸಾಮೂಹಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ಏರ್ಪಡಿಸಲಾಗಿದೆ ಎಂದು ಹೇಳಿದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಸಂಘ ಪರಿವಾರದ ಪ್ರಮುಖರಾದ ಗಿರೀಶ್ ಕಾರಂತ್, ಪ್ರಮುಖರಾದ ಕೃಷ್ಣ ಶೆಟ್ಟಿ, ಅಪ್ಪುಕುಟ್ಟಿ, ಕೆ.ಎಚ್.ಮಹೇಶ್, ಮಂಜುನಾಥ್, ಎ.ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts