More

    ಪೌಷ್ಟಿಕ ಆಹಾರ ಬಳಕೆಗೆ ಸಲಹೆ

    ವಿಜಯವಾಣಿ ಸುದ್ದಿಜಾಲ ಗಂಗಾವತಿ
    ನಗರದ ಸಿಬಿಎಸ್ ಕಾಲನಿಯ ಮಹಿಳಾ ಬಳಗದಿಂದ ಸೇವ್ ನೇಚರ್ ಪರಿಕಲ್ಪನೆಯಡಿ ಜಾಗೃತಿ ಅಭಿಯಾನ ಗುರುವಾರ ಹಮ್ಮಿಕೊಳ್ಳಲಾಗಿತ್ತು.


    ಪ್ಲಾಸ್ಟಿಕ್ ಪ್ರೇರಿತ ವಸ್ತುಗಳಿಂದ ಪರಿಸರದ ಮೇಲಾಗುವ ಪರಿಣಾಮ ಕುರಿತು ಮಹಿಳೆಯರು ಕಾಲನಿಯಲ್ಲಿ ಜಾಗೃತಿ ಮೂಡಿಸಿದರಲ್ಲದೇ, ಪ್ಲಾಸ್ಟಿಕ್ ಬದಲಾಗಿ ಸ್ಟೀಲ್ ವಸ್ತುಗಳನ್ನು ಬಳಸುವ ಬಗ್ಗೆ ಮಾಹಿತಿ ನೀಡಿದರು. ಹೊಸ ವರ್ಷವನ್ನು ಪ್ಲಾಸ್ಟಿಕ್ ನಿಷೇಧ ವರ್ಷವನ್ನಾಗಿ ಆಚರಿಸುವ ಸಂಕಲ್ಪ ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಆರೋಗ್ಯಪೂರ್ಣ ಖಾದ್ಯಗಳ ಪ್ರದರ್ಶನದ ಮೂಲಕ ಪೌಷ್ಟಿಕ ಆಹಾರ ಬಳಸುವಂತೆ ಸಲಹೆ ನೀಡಲಾಯಿತು. ಬಳಗದ ಮುಖ್ಯಸ್ಥೆ ಆವನಿ ಮುಥಾ ಮಾತನಾಡಿ, ಪರಿಸರ ಸಂರಕ್ಷಣೆಗಾಗಿ ಕೈಲಾದಷ್ಟು ಜಾಗೃತಿ ಮೂಡಿಸಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಯೂಸ್ ಆ್ಯಂಡ್ ಥ್ರೋ ವಸ್ತುಗಳ ಬಳಕೆ ನಿಲ್ಲಿಸಲಾಗಿದೆ ಎಂದರು.


    ಬಳಗದ ಪ್ರತಿನಿಧಿಗಳಾದ ರಜಿತಾ ಬೊಡ್ಡು, ವಿಜಯಶ್ರೀ ಕರಡಕಲ್, ಶ್ರುತಿ, ಕಲ್ಪನಾ, ಸನುತಾ ನಾಗಮಲ್ಲಿ, ವರ್ಷಾ ಬ್ನಾ, ಖುಷಿಗೌಡ, ವನಜಾ ಬಾಗೋಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts