More

    ದೇಶ ಕಟ್ಟಲು ಎನ್ನೆಸ್ಸೆಸ್ ಪ್ರೇರಣೆ

    ಹುಣಸೂರು: ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯು ದೇಶಕಟ್ಟುವ ಕಾರ್ಯಕ್ಕೆ ಅಡಿಪಾಯ ಹಾಕುವ ವೇದಿಕೆಯಾಗಿದೆ ಎಂದು ಹಿರೀಕ್ಯಾತನಹಳ್ಳಿ ಗ್ರಾಮದ ಹಿರಿಯ ಯಜಮಾನ ಎಚ್.ಆರ್.ಜಗದೀಶ್ ಅಭಿಪ್ರಾಯಪಟ್ಟರು.

    ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ಗಾಂಧೀಜಿಯವರ ಮಹತ್ವಾಕಾಂಕ್ಷೆಯ ಕನಸಾಗಿ ರೂಪುಗೊಂಡ ಎನ್‌ಎಸ್‌ಎಸ್ ಘಟಕವು ದೇಶದ ಯುವಸಮೂಹವನ್ನು ದೇಶಕಟ್ಟುವ ಕಾಯಕಕ್ಕೆ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡಲಿ ಎನ್ನುವ ಉದ್ದೇಶ ಹೊಂದಿದೆ. ಎನ್‌ಎಸ್‌ಎಸ್ ಶಿಬಿರ ಕೇವಲ ಸ್ವಚ್ಛತೆ, ಅರಿವು ಕಾರ್ಯಕ್ರಮ ಮಾತ್ರವಲ್ಲ ನಮ್ಮ ಗ್ರಾಮೀಣ ಸಮಾಜದ ಬದುಕು ಬವಣೆ ತಿಳಿಸುತ್ತದೆ. ಸೇವೆಯ ಮಹತ್ವದ ಜತೆಗೆ ನಾಯಕತ್ವ ಗುಣವನ್ನೂ ಕಲಿಸುತ್ತದೆ. ವಿದ್ಯಾರ್ಥಿಗಳು ಶಿಬಿರದ ಮಹತ್ವವನ್ನು ಗಂಭೀರವಾಗಿ ಪರಿಗಣಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರೀಕ್ಯಾತನಹಳ್ಳಿ ಗ್ರಾ.ಪಂ.ಅದ್ಯಕ್ಷೆ ರುಕ್ಮಿಣಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕಾರ್ತಿಕ್, ಗ್ರಾಪಂ ಸದಸ್ಯ ಜವರೇಗೌಡ, ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪುಟ್ಟರಾಜು, ನಿರ್ದೇಶಕ ಎಂ. ಎಚ್. ಮಹದೇವ್, ನಿವೃತ್ತ ಶಿಕ್ಷಕ ಶಿವಣ್ಣ, ಡೇರಿ ಅಧ್ಯಕ್ಷ ಮಹೇಶ್, ಮರೂರು ಗ್ರಾಮದ ಡೇರಿ ಎಎಂಸಿ ಕೇಂದ್ರದ ಅಧ್ಯಕ್ಷ ಹರೀಶ್ ಕಾವಲ್, ಪ್ರೌಢಶಾಲಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ನಾಗೇಂದ್ರ, ನಿರ್ದೇಶಕರಾದ ಜಯಣ್ಣ, ಕೃಷ್ಣೇಗೌಡ, ಕಂದಾಯ ಇಲಾಖೆಯ ಹರೀಶ್, ಗ್ರಾಮದ ಹಿರಿಯರಾದ ನಂಜೇಗೌಡ, ಸಹ ಶಿಬಿರಾಧಿಕಾರಿಗಳಾದ ಪ್ರದೀಪ್ ಕುಮಾರ್, ಎಂ.ಪದ್ಮಾ, ನಿತೀಶ್ ಕೃಪಾಲ್, ಅರ್ಚನಾ, ಶಾಂತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts