More

    VIDEO | ಸೈಕಲ್ ಸವಾರಿ ಮಾಡುತ್ತಾ ಗೂಗಲ್​​ ಮ್ಯಾಪ್​ ಮೂಲಕ ಸಿಎಂ ಕೆಸಿಆರ್ ಭಾವಚಿತ್ರ ಅರಳಿಸಿದ ಲಂಡನ್​ ವ್ಯಕ್ತಿ

    ಹೈದರಾಬಾದ್ : ಅಭಿಮಾನಿಗಳ ಪ್ರೀತಿಗೆ ಮೀತಿಯೇ ಇಲ್ಲ ಎಂಬಂತೆ ಜನರು ತಮ್ಮ ನೆಚ್ಚಿನ ಕಲಾವಿದರು ಹಾಗೂ ರಾಜಕೀಯ ವ್ಯಕ್ತಿಗಳ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಅದಕ್ಕೆ ಉದಾಹರಣೆ ಎನ್ನುವಂತೆ ಸೈಕ್ಲಿಸ್ಟ್ ಮಲ್ಲಾ ರೆಡ್ಡಿ ಬೀರಂ ಲಂಡನ್​ನಲ್ಲಿ ಗೂಗಲ್ ಮ್ಯಾಪಿಂಗ್ ಮೂಲಕ ತಮ್ಮ ನೆಚ್ಚಿನ ರಾಜಕೀಯ ವ್ಯಕ್ತಿಯ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸೈಕ್ಲಿಂಗ್ ಮಾಡುತ್ತಾ ಗೂಗಲ್ ಮ್ಯಾಪಿಂಗ್ ಮೂಲಕ ತಮ್ಮ ನೆಚ್ಚಿನ ವ್ಯಕ್ತಿಗಳ ಚಿತ್ರ ಬಿಡಿಸುವುದು ವಿಶೇಷ ಟ್ರೆಂಡ್ ಆಗಿಬಿಟ್ಟಿದೆ. ಲಂಡನ್ ಸೈಕ್ಲಿಸ್ಟ್ ಮಲ್ಲಾ ರೆಡ್ಡಿ ಬೀರಂ ಎಂಬುವವರು ತೆಲಂಗಾಣ ಮುಖ್ಯಮಂತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರ ಭಾವಚಿತ್ರವನ್ನು ಗೂಗಲ್​ ನಕ್ಷೆಯಲ್ಲಿ ಲಂಡನ್ ನಗರದ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಸಂಚರಿಸಿ ಚಿತ್ರಿಸಿದ ಕೆಸಿಆರ್ ಚಿತ್ರವುಳ್ಳ ಮಾರ್ಗವನ್ನು ವೀಕ್ಷಕರು/ಸಾರ್ವಜನಿಕರು ಒಂದು ಕೆಂಪು ಬಣ್ಣದ ಮ್ಯಾಪಿಂಗ್ ನಲ್ಲಿ ನೋಡಬಹುದಾಗಿದೆ.

    ವಿಡಿಯೋದಲ್ಲಿ ಏನಿದೆ?: ಮಲ್ಲಾ ರೆಡ್ಡಿ ಬೀರಂ ಸಂಚರಿಸಿದ ರಸ್ತೆಗಳನ್ನೆಲ್ಲ ಒಂದೆಡೆ ಸೇರಿಸಿದರೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಭಾವಚಿತ್ರ ಸಿಗುತ್ತದೆ. ಕೆಸಿಆರ್ ರೈಡ್ ಹೆಸರಿನಲ್ಲಿ ರಸ್ತೆಗಳಲ್ಲಿ ಸೈಕ್ಲಿಂಗ್ ಮಾಡುವಾಗ ಗೂಗಲ್ ರೂಟ್ ಮ್ಯಾಪ್ ಬಳಸುತ್ತಿದ್ದರು. ಅದಕ್ಕೂ ಮುನ್ನ ಆಯ್ದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಸೈಕಲ್ ತುಳಿಯುತ್ತಿದ್ದರು. ಎಲ್ಲವೂ ಮುಗಿದ ನಂತರ, ಅವರು ಪ್ರಯಾಣಿಸಿದ ಮಾರ್ಗವನ್ನು ಗೂಗಲ್ ಮಾಡಿದರು. ಎಲ್ಲಾ ಮಾರ್ಗಗಳನ್ನು ಸಂಯೋಜಿಸುವ ಮೂಲಕ, ಕೆಸಿಆರ್ ಅವರ ಪರಿಪೂರ್ಣ ರೇಖಾಚಿತ್ರವು ಬಂದಿತು. ಮಲ್ಲಾರೆಡ್ಡಿ ಅವರು ಕೆಸಿಆರ್ ಮೇಲಿನ ಅಭಿಮಾನವನ್ನು ವಿನೂತನವಾಗಿ ವ್ಯಕ್ತಪಡಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಎರಡು ಮಕ್ಕಳ ತಂದೆಯಾಗಿರುವ ರೆಡ್ಡಿ ಈ ಸಾಧನೆಯನ್ನು ಮಾಡಲು 6 ಗಂಟೆಗೂ ಕಡಿಮೆ ಸಮಯವನ್ನು ತೆಗೆದುಕೊಂಡಿದ್ದಾರೆ. ಹೌದು, ಲಂಡನ್ ನಗರದಾದ್ಯಂತ 6 ಗಂಟೆಗೂ ಕಡಿಮೆ ಸಮಯದಲ್ಲಿ 88 ಕಿ.ಮೀ ಸಂಚರಿಸಿ ನಕ್ಷೆಯನ್ನು ಚಿತ್ರಿಸಿ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋವನ್ನು ಭಾರತ್ ರಾಷ್ಟ್ರ ಸಮಿತಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಮುಂಗಾರು ಮಳೆ ನಟಿಗೆ ಕೂಡಿ ಬಂದ ಕಂಕಣ ಭಾಗ್ಯ; ಕನ್ನಡ ಕಲಿಸಿದ ಗುರುವನ್ನೇ ವರಿಸಲಿದ್ದಾರೆ ಪೂಜಾ ಗಾಂಧಿ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts