More

    ತಿರುಪತಿಯಲ್ಲಿಲ್ಲ ಈಗ ದೊಡ್ಡೋರು-ಚಿಕ್ಕೋರು ಅನ್ನೋ ಭೇದ; 8 ತಿಂಗಳ ಬಳಿಕ ನಿರ್ಬಂಧ ತೆರವು

    ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದಲ್ಲೀಗ ದೊಡ್ಡೋರು-ಚಿಕ್ಕೋರು ಅನ್ನೋ ಭೇದವಿಲ್ಲ. ಎಂಟು ತಿಂಗಳ ಕಾಲ ಇದ್ದ ಇಂಥದ್ದೊಂದು ನಿರ್ಬಂಧವನ್ನು ಇದೀಗ ತಿರುಮಲ ತಿರುಪತಿ ದೇವಸ್ಥಾನಮ್ಸ್​ (ಟಿಟಿಡಿ) ಆಡಳಿತ ಮಂಡಳಿ ತೆಗೆದುಹಾಕಿದೆ. ಈ ಮೂಲಕ ಭಕ್ತರಿಗೆ ಸಂತೋಷದ ಸುದ್ದಿಯೊಂದನ್ನು ನೀಡಿದೆ.

    ಹೌದು.. ಕರೊನಾ ಹಾವಳಿಯಿಂದಾಗಿ ದೇವಸ್ಥಾನದಲ್ಲಿ ಎಂಟು ತಿಂಗಳ ಹಿಂದೆ ನಿರ್ಬಂಧವೊಂದನ್ನು ವಿಧಿಸಲಾಗಿತ್ತು. ಅಂದರೆ, 65 ವರ್ಷಕ್ಕೆ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಕರೊನಾ ಪ್ರಕರಣಗಳ ಸಂಖ್ಯೆ ತಗ್ಗಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ದೇವಸ್ಥಾನಕ್ಕೆ ಮತ್ತೆ ಪ್ರವೇಶ ಕಲ್ಪಿಸಲಾಗಿತ್ತು. ಆದರೆ ವೃದ್ಧರು ಹಾಗೂ ಮಕ್ಕಳ ಹಿತಕ್ಕಾಗಿ ಅವರಿಗಿದ್ದ ನಿರ್ಬಂಧ ಮುಂದುವರಿದಿತ್ತು. ಈಗ ಆ ನಿರ್ಬಂಧವನ್ನೂ ದೇವಸ್ಥಾನದ ಆಡಳಿತ ಮಂಡಳಿ ತೆಗೆದು ಹಾಕಿದೆ. ಮಾತ್ರವಲ್ಲ, ಗರ್ಭಿಣಿಯರ ಪ್ರವೇಶಕ್ಕೂ ಈ ಹಿಂದೆ ನಿರ್ಬಂಧ ವಿಧಿಸಲಾಗಿದ್ದು, ಈಗ ಅದನ್ನು ಕೂಡ ತೆಗೆದುಹಾಕಲಾಗಿದೆ. ಹೀಗಾಗಿ ಹಿರಿ-ಕಿರಿಯರೆನ್ನದೆ ಎಲ್ಲರೂ ಈಗ ದೇವಸ್ಥಾನಕ್ಕೆ ಪ್ರವೇಶಿಸಬಹುದಾಗಿದೆ.

    ಇನ್ನು ಸದ್ಯ ಸ್ಪೆಷಲ್​ ಕ್ಯೂ ವ್ಯವಸ್ಥೆ ಇಲ್ಲದಿರುವುದರಿಂದ ಈಗ ನಿರ್ಬಂಧ ತೆರವುಗೊಳಿಸಲಾಗಿರುವ ಕೆಟಗರಿಯ ಭಕ್ತರು ಕೂಡ ಪ್ರಸ್ತುತ ಜಾರಿಯಲ್ಲಿರುವ ಸಾಮಾನ್ಯ ಸರದಿಯಲ್ಲೇ ಸಾಗಿ ದೇವರ ದರ್ಶನ ಪಡೆಯಬೇಕು. ಅಲ್ಲದೆ ಭಕ್ತರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. (ಏಜೆನ್ಸೀಸ್​)

    ವಿಷ್ಣುವರ್ಧನ್ ಬಗ್ಗೆ ಕೀಳುಮಟ್ಟದ ಹೇಳಿಕೆ; ತೆಲುಗು ನಟನ ವಿರುದ್ಧ ಸಿಡಿದೆದ್ದ ಚಂದನವನ

    ವೈದ್ಯಕೀಯ ಪದವಿ ಪಡೆಯುವವರು 10 ವರ್ಷ ರಾಜ್ಯದಲ್ಲೇ ಸೇವೆ ಸಲ್ಲಿಸುವುದು ಕಡ್ಡಾಯ! ತಪ್ಪಿದರೆ 1 ಕೋಟಿ ಫೈನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts