More

    ಅಮೆರಿಕದ ಜಾರ್ಜಿಯಾದಲ್ಲಿ ನವಂಬರ್ ಒಂದು ‘ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ’ವೆಂದು ಆಚರಿಸುವುದಾಗಿ ಘೋಷಣೆ

    | ಬೆಂಕಿ ಬಸಣ್ಣ ನ್ಯೂಯಾರ್ಕ್​
    ಅಮೆರಿಕದಲ್ಲಿರುವ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಯಾನ್ ಕೆಂಪ್ ಅವರು ಪ್ರತಿವರ್ಷವೂ ನವಂಬರ್ ಒಂದನೇ ದಿವಸವನ್ನು ಜಾರ್ಜಿಯಾ ರಾಜ್ಯದಲ್ಲಿ ‘ಕನ್ನಡ ಭಾಷೆ ಮತ್ತು ರಾಜ್ಯೋತ್ಸವ’ ದಿನವನ್ನಾಗಿ ಆಚರಿಸಲು ಅಧಿಕೃತವಾಗಿ ಘೋಷಿಸಿದರು.

    ಇದು ಒಂದು ಮಹತ್ವದ ಐತಿಹಾಸಿಕ ಘಟನೆ. ಇದಕ್ಕಾಗಿ ದೀರ್ಘಕಾಲ ಸತತವಾಗಿ ಹಗಲಿರುಳು ಶ್ರಮ ವಹಿಸಿದವರು ಜಾರ್ಜಿಯಾ ರಾಜ್ಯದ ಅಟ್ಲಾಂಟದಲ್ಲಿರುವ ನೃಪತುಂಗ ಕನ್ನಡ ಸಂಘದ ಅಧ್ಯಕ್ಷರಾದ ದಿವಾಕರ, ಚೇರ್ಮನ್ ಡಾಕ್ಟರ್ ಎನ್​.ಎಸ್. ಪ್ರಸಾದ್, ಪಬ್ಲಿಸಿಟಿ ಕಮಿಟಿ ಉಪಾಧ್ಯಕ್ಷ ಶ್ರೀಧರ್ ವೆಂಕಟ್ ಮತ್ತು ದಂಪತಿಗಳಾದ ಡಾಕ್ಟರ್​ ಅನು ಭಟ್ ಮತ್ತು ಸುಬ್ರಹ್ಮಣ್ಯ ಭಟ್ ಮತ್ತು ಅನೇಕ ಕನ್ನಡ ಅಭಿಮಾನಿಗಳು.

    ಬರುವ ದಿನಗಳಲ್ಲಿ ಅಮೆರಿಕದಲ್ಲಿರುವ ಬೇರೆ ಬೇರೆ ರಾಜ್ಯಗಳಲ್ಲಿಯೂ ಸಹಿತ ಈ ರೀತಿ ಮಾಡುವ ಪ್ರಯತ್ನಗಳು ನಡೆಯಲಿವೆ.

    ಅಮೆರಿಕದ ಜಾರ್ಜಿಯಾದಲ್ಲಿ ನವಂಬರ್ ಒಂದು 'ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ'ವೆಂದು ಆಚರಿಸುವುದಾಗಿ ಘೋಷಣೆ ಅಮೆರಿಕದ ಜಾರ್ಜಿಯಾದಲ್ಲಿ ನವಂಬರ್ ಒಂದು 'ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ'ವೆಂದು ಆಚರಿಸುವುದಾಗಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts