More

    VIDEO | ಕರೆಂಟ್ ಬಿಲ್ ಕಟ್ಟದಂತೆ ಡಂಗೂರ ಸಾರಿ ಗ್ರಾಮಸ್ಥರಿಗೆ ಸೂಚನೆ!

    ಬೆಂಗಳೂರು: ದಿನದಿಂದ ದಿನಕ್ಕೆ ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅದರಲ್ಲೂ 200 ಯೂನಿಟ್ ವಿದ್ಯುತ್ ಉಚಿತ ಎಂದಿರುವ ಬಗ್ಗೆ ಹಲವು ಗೊಂದಲಗಳ ನಡುವೆ, ಕರೆಂಟ್ ಬಿಲ್ ಕಟ್ಟಬೇಡಿ/ಕಟ್ಟಲ್ಲ ಎಂಬ ಮಾತುಗಳು ರಾಜ್ಯದ ವಿವಿಧೆಡೆ ವ್ಯಕ್ತವಾಗುತ್ತಿವೆ. ಈಗಾಗಲೇ ವಿಪಕ್ಷಗಳು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಜ್ಯದ ಜನರು ಯಾವುದೇ ಕಾರಣಕ್ಕೂ ಕರೆಂಟ್‌ ಬಿಲ್‌ ಕಟ್ಟಬೇಡಿ ಎಂದು ರಾಜ್ಯದ ಜನರಿಗೆ ಬಿಜೆಪಿ ಪ್ರಮುಖ ನಾಯಕರು ಕರೆಕೊಟ್ಟಿದ್ದಾರೆ. ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳಾಗುತ್ತಿವೆ. 

    ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ; ಫೋಟೋ ಝಲಕ್​ ಇಲ್ಲಿದೆ…

    ಇದೀಗ ದಾವಣಗೆರೆ ತಾಲ್ಲೂಕಿನ ಗೋಣಿವಾಡದಲ್ಲಿ ತಮಟೆ ಬಾರಿಸಿ, ಕರೆಂಟ್ ಬಿಲ್ ಕಟ್ಟದಂತೆ ಡಂಗೂರ ಸಾರಲಾಗಿದೆ. ಈ ಮೂಲಕ ಜನರಿಗೆ ವಿದ್ಯುತ್ ಬಿಲ್ ಕಟ್ಟದಂತೆ ಮಾಹಿತಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಉಚಿತ ವಿದ್ಯುತ್ ನೀಡುವಂತೆ ಹೇಳಿದ್ದಾರೆ. ಹೀಗಾಗಿ ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟದಿರಲು ನಿರ್ಧಾರ ಮಾಡಿದ್ದಾರೆ ಎಂದು ಡಂಗೂರ ಸಾರಲಾಗಿದೆ.

    ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರೆಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿ ಇದುವರೆಗೂ ಜಾರಿ ಮಾಡಿಲ್ಲ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಮಹಿಳೆಯರು ಟಿಕೆಟ್ ಪಡೆಯದೆ ಪ್ರಯಾಣಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಕರೆ ಕೊಟ್ಟಿದ್ದಾರೆ.

    ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ. ಹೆಚ್ಚುವರಿಯಾಗಿ ಬಳಸಿದ್ದರೆ ಮಾತ್ರ ಬಿಲ್​ ಕಟ್ಟಿ, ಗ್ಯಾರಂಟಿ ಕಾರ್ಡ್​ನಲ್ಲಿ ಕಾಂಗ್ರೆಸ್​ನವರು ಎಲ್ಲಿಯೂ ಷರತ್ತುಗಳು ಅನ್ವಯ ಅಂತ ನಮೂದಿಸಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts