More

    ಕಸ ವಿಲೇವಾರಿ ಸಮಸ್ಯೆ ಕುರಿತು ದೂರು ಹಿನ್ನೆಲೆ: ಸುಳ್ಯ ನಪಂ ಅಧ್ಯಕ್ಷ ಸಹಿತ ಐವರಿಗೆ ನೋಟಿಸ್

    ಸುಳ್ಯ: ನಗರ ಪಂಚಾಯಿತಿ ಆವರಣದಲ್ಲಿನ ಕಸದ ರಾಶಿಯಿಂದ ದುರ್ನಾತ ಬರುತ್ತಿದ್ದು ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಗೆ ನೀಡಿದ ದೂರಿನನ್ವಯ ನ.ಪಂ ಅಧ್ಯಕ್ಷ, ಮುಖ್ಯಾಧಿಕಾರಿ ಸಹಿತ ಐವರಿಗೆ ನೋಟಿಸ್ ಜಾರಿಯಾಗಿದೆ.

    ಕಸ ವಿಲೇವಾರಿ ಮಾಡದ ಕಾರಣ ದುರ್ನಾತ ಬರುತ್ತಿದ್ದು ಇದರಿಂದ ವಾಸಿಸಲು ಸಾಧ್ಯವಾಗುತ್ತಿಲ್ಲ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಕಸದ ರಾಶಿಯಲ್ಲಿ ಸತ್ತ ಪ್ರಾಣಿಗಳು ಕೂಡ ಇರುತ್ತಿದ್ದು ಪರಿಸರ ದುರ್ನಾತ ಬೀರಿ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು.

    ದೂರನ್ನು ಸ್ವೀಕರಿಸಿರುವ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯಾಧೀಶ ಸೋಮಶೇಖರ್ ಎ. ಅವರು ನಗರ ಪಂಚಾಯಿತಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಕ್, ನಗರ ಪಂಚಾಯಿತಿ ಮುಖ್ಯ ಅಧಿಕಾರಿ ಎಂ.ಆರ್.ಸ್ವಾಮಿ, ಆರೋಗ್ಯ ನಿರೀಕ್ಷಕ ಲಿಂಗರಾಜು ಅವರಿಗೆ ನೋಟಿಸ್ ನೀಡಿ, 7 ದಿನಗಳೊಳಗೆ ಇದರ ಬಗ್ಗೆ ಕ್ರಮ ಕೈಗೊಂಡು ಪೂರ್ಣ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts