More

    ಪರಿಶಿಷ್ಟರ ಹಣ ಬೇರೆಯದಕ್ಕೆ ಬಳಸಿಲ್ಲ : ಸಿಎಂ ಯಡಿಯೂರಪ್ಪ

    ಬೆಂಗಳೂರು : ಲಾಕ್​ಡೌನ್​ ಪರಿಹಾರ ಪ್ಯಾಕೇಜ್​ಗಳನ್ನು ನೀಡಲು ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾದ ಹಣವನ್ನು ಬಳಸಿಕೊಳ್ಳಲಾಗಿದೆ ಎಂಬ ವಿರೋಧಪಕ್ಷದ ಆರೋಪಗಳನ್ನು ಸಿಎಂ ಬಿ.ಎಸ್​.ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ನಾವು ಪರಿಶಿಷ್ಟರ ಅನುದಾನದ ಹಣವನ್ನು ಬೇರೆಯದಕ್ಕೆ ಬಳಸಿಕೊಂಡಿಲ್ಲ. 2021-22ನೇ ಸಾಲಿನ ಪರಿಶಿಷ್ಟರ ಅಭಿವೃದ್ಧಿ ಬಗ್ಗೆ ಚರ್ಚಿಸಿ ಅನುಷ್ಠಾನದ ಬಗ್ಗೆ ನಿರ್ಧರಿಸಿರುವುದಾಗಿ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್​​ವೈ, ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ 18,300 ಕೋಟಿ ರೂ.ಗಳು, ಪರಿಶಿಷ್ಟ ಪಂಗಡಕ್ಕೆ 7673 ಕೋಟಿ ರೂ.ಗಳು ಸೇರಿ ಒಟ್ಟು 26500 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈಗ ಎಲ್ಲಾ ಇಲಾಖೆಗಳಲ್ಲಿ ಎಸ್​ಸಿಪಿ, ಟಿಎಸ್​ಪಿ ಹಣ ಬಿಡುಗಡೆಗೆ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆಯಾಗಿದೆ. ಅನುಮೋದನೆಗೆ ಇವತ್ತಿನ ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದರು.

    ಇದನ್ನೂ ಓದಿ: ಗೋವಾದಲ್ಲಿ ಕನ್ನಡಿಗರ ಸುರಕ್ಷತೆಗೆ ಕ್ರಮ ತೊಗೊಳ್ಳಿ : ಕುಮಾರಸ್ವಾಮಿ ಆಗ್ರಹ

    ನಿಗದಿತ ಅವಧಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಶೇ. 100 ರಷ್ಟು ಗುರಿ ಸಾಧನೆಗೆ ಮುಂದಾಗಿದ್ದೇವೆ. ಪರಿಶಿಷ್ಟರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪರಿಶಿಷ್ಟರ ಬದುಕಿನ ಮಟ್ಟ ಸುಧಾರಿಸಬೇಕು. ಹಾಗಾಗಿ ಯೋಜನೆಗಳ ಅನುಷ್ಠಾನದ ಬಗ್ಗೆ ಸೂಚಿಸಿದ್ದೇವೆ ಎಂದು ಸಿಎಂ ಹೇಳಿದರು.

    ಸಚಿವ ಶ್ರೀರಾಮುಲು ಪಿಎ ಅರೆಸ್ಟ್ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಸಿಎಂ ‘ನೋ ಆನ್ಸರ್’ ಎಂದರು. ಶ್ರೀರಾಮುಲು ಅವರಿಗೆ ಸನ್ನೆ ಮಾಡಿ ಹೊರಗೆ ಕರೆದೊಯ್ದರು.

    ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಯಾವುದೇ ಹಣ ಡೈವರ್ಶನ್ ಆಗಿಲ್ಲ. ಬೇರೆ ಬೇರೆ ಇಲಾಖೆಗೆ ನೀಡಲಾಗಿದೆ. ಎಸ್​​ಸಿಪಿ, ಟಿಎಸ್​​ಪಿಯಡಿ 7084 ಕೋಟಿ ರೂಪಾಯಿಗಳನ್ನು ಪರಿಶಿಷ್ಟರ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ಯಾವುದೇ ಹಣ ಡೈವರ್ಶನ್ ಮಾಡಿಲ್ಲ ಎಂದು ಪುನರುಚ್ಚರಿಸಿದರು.

    ಸಾಂಕ್ರಾಮಿಕದಲ್ಲಿ ಲಾಭ ಗಳಿಸುವುದು ಹೇಗೆ ಎಂದು ಶ್ವೇತಪತ್ರ ಪ್ರಕಟಿಸಿ: ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಟಾಂಗ್

    ಸಂಚಾರಿ ವಿಜಯ್​ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್​ ಸವಾರ ನವೀನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts