More

    ಮನೆಗಳನ್ನು ಮಾರಾಟ ಮಾಡದಂತೆ ಫಲಾನುಭವಿಗಳಿಗೆ ತಿಪ್ಪಾರೆಡ್ಡಿ ಮನವಿ

    ಚಿತ್ರದುರ್ಗ: ತಮ್ಮ ಮನೆಗಳನ್ನೂ ಮಾರಾಟ ಮಾಡಿಕೊಳ್ಳಬೇಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಸತಿ ಫಲಾನುಭವಿಗಳಿಗೆ ಮನವಿ ಮಾಡಿದ ರು. ನಗರದ ಎಪಿಎಂಸಿ ಆವರಣದಲ್ಲಿ ಮಹಿಳಾ ಹಮಾಲರಿಗೆ ನಿರ್ಮಿಸಿರುವ ಮನೆಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ,ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ಮಹಿಳಾ ಹಮಾಲರಿಗೆ,ನಿವೇಶನ ಮಂಜೂರು ಮಾಡಿ ನಿರ್ಮಿಸಿದ್ದೇವೆ.

    ಈ ಹಿಂದೆ ಪುರುಷ ಹಮಾಲರಿಗೆ 150 ಮನೆಗಳು ನೀಡಲಾಗಿತ್ತು. ಮಹಿಳಾ ಹಮಾಲರ ವಸತಿಗೆ ಜಾಗ ಗುರುತಿಸಿ 133 ಮನೆಗಳನ್ನು ನಿರ್ಮಿಸಲಾಗಿದೆ. ಏಳು ವರ್ಷಗಳಿಂದ ಇದಕ್ಕಾಗಿ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿದ್ದೇನೆ. ಮನೆಗಳನ್ನು ನಿರ್ಮಿಸಿರುವ ಎಪಿಸಿ ಎಂಸಿ ಆವರಣ ನಗರದ ಹೃದಯ ಭಾಗದಲ್ಲಿದೆ.

    ಈ ಹಿಂದೆ ಗಾಂಧಿ ನಗರದಲ್ಲಿ ಬಡವರಿಗೆಂದು ನಿರ್ಮಿಸಿದ್ದ ಮನೆಗಳನನು ಫಲಾನುಭವಿಗಳಿಗೆ ಮಾರಾಟ ಮಾಡಿಕೊಂಡಿರುವುದು ನೋವು ಉಂಟು ಮಾಡಿದೆ. ಆದ್ದರಿಂದ ಕಷ್ಟ ಪಟ್ಟು ಈ ಸ್ಥಳದಲ್ಲಿ ಮನೆ ನಿರ್ಮಿಸಿದ್ದೇನೆ. ದಯವಿಟ್ಟು ಫಲಾನುಭವಿಗಳು ಮನೆಗಳನ್ನು ಮಾರಾಟ ಮಾಡಬಾರದು.

    ಹಮಾಲರಿಗೆ ನಿರ್ದಿಷ್ಟ ಪ್ರದೇಶವೆಂದು ಸೀಮಿತಗೊಳಿಸದೆ ನಗರದಲ್ಲಿ ಅವಕಾಶವಿರುವ ಕಡೆಗಳಲ್ಲಿ ಮನೆಗಳನ್ನು ಮಂಜೂರು ಮಾಡಿಸಿ ವಿತರಿಸಲಾಗಿದೆ. ಇನ್ನು ಅಂದಾಜು 800 ಹಮಾಲರಿಗೆ ಮನೆ ನಿರ್ಮಿಸಿ ಕೊಡಬೇಕಿದೆ. ಮಹಿಳಾ ಹಮಾಲರ 133 ಮನೆಗಳ ಪೈಕಿ 54 ಮ ನೆಗಳಿಗೆ ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸ ಲಾಗಿದೆ. ಉಳಿದ ಮನೆಗಳ ಕಾಮಗಾರಿ ಪೂರ್ಣವಾದ ಬಳಿಕ ವಿ ದ್ಯುತ್ ಸಂಪರ್ಕ ಒದಗಿಸಲಾಗುವುದು.

    ಎಂಥದ್ದೇ ಸಮಸ್ಯೆಗಳಿದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ತಪ್ಪಿಸಬೇಡಿ. ನಿಮ್ಮ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಮುಂದಿನ ದಿನಗಳಲ್ಲಿ ಇಲ್ಲಿಯ ರಸ್ತೆಗೂ ಅನುದಾನ ಕೊಡುತ್ತೇನೆ. ಈಗಾಗಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಬೆಸ್ಕಾಂ ಇಇ ಇಂಜಿನಿಯರ್ ಜಯಣ್ಣ ಮಾತನಾಡಿದರು. ಎಇಇ ನಾಗರಾಜ್,ಎಪಿಎಂಸಿ ಕಾರ‌್ಯದರ್ಶಿ ದೊರೆಸ್ವಾಮಿ,ಹಮಾಲರ ಸಂಘದ ಅಧ್ಯಕ್ಷ ಬಸ ವರಾಜ್,ಜಯರಾಮರೆಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts