ಸರ್ಕಾರಿ ನೌಕರರ ಸಂಘದ ತೇಜೋವಧೆ ಸಲ್ಲ

Request letter giving to Tahasildar.
Published on

ಯಲ್ಲಾಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ಧ ಕೆಲ ಸರ್ಕಾರಿ ನೌಕರರು ಅಪಪ್ರಚಾರ ಮಾಡಿ ಸಂಘದ ಅಧ್ಯಕ್ಷರು ಮತ್ತು ಸಂಘದ ಎಲ್ಲ ಶಾಖೆಗಳ ವಿರುದ್ಧ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಸೋಮವಾರ ಯಲ್ಲಾಪುರ ಶಾಖೆಯ ವತಿಯಿಂದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕೆಲವು ನೌಕರರು ಅಧ್ಯಕ್ಷರ ಜನಪರ ಕೆಲಸ,ಕಾಳಜಿ ಸಹಿಸದೇ ಅಪಪ್ರಚಾರ ಎಸಗುತ್ತಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ನಾಯಕ, ರಾಜ್ಯ ಪರಿಷತ್ ಸದಸ್ಯ ಸಂಜೀವಕುಮಾರ ಹೊಸ್ಕೇರಿ, ಪ್ರಮುಖರಾದ ಜಿ.ಎಂ.ಭಟ್ಟ, ಶರಣಪ್ಪ ಗೊಜನೂರು, ಸುಭಾಸ ನಾಯಕ, ಸಿ.ಜಿ.ನಾಯ್ಕ, ಅಜೇಯ ನಾಯಕ, ಗಂಗಾಧರ ಪಟಗಾರ, ಮಾರುತಿ ನಾಯ್ಕ, ಗಣಪತಿ ಭಾಗ್ವತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net