More

    ಜಾತಿಗಣತಿ ವರದಿ ಜಾರಿಯಾಗಬಾರದು ಎಂಬುದು ಸರಿಯಲ್ಲ: ಪರಮೇಶ್ವರ

    ಬೆಂಗಳೂರು: ಬೆಂಗಳೂರು ಜಾತಿ ಗಣತಿಯ ವರದಿಯ ಪರಿಣಾಮದ ಬಗ್ಗೆ ಸಲಹೆಗಳನ್ನು ನೀಡಲಿ. ಆದರೆ, ಜಾರಿಯಾಗಬಾರದು ಎಂಬುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

    ಜಾತಿಗಣತಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಯುತ್ತಿದೆ. ಇದಕ್ಕೆ ಟಾಂಗ್ ಕೊಡುವ ರೀತಿಯಲ್ಲಿ ಲಿಂಗಾಯತ ಸಮಾವೇಶ ಆಗುತ್ತದೆಯಂತೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
    ಸರ್ಕಾರ ತೀರ್ಮಾನ ಮಾಡಿ ಜಾತಿಗಣತಿಗೆ ಹಣ ಖರ್ಚು ಮಾಡಿದೆ. ವರದಿಯ ಇಂಪ್ಯಾಕ್ಟ್ ಬಗ್ಗೆ, ಬೇರೆಬೇರೆ ತೀರ್ಮಾನಗಳ ಬಗ್ಗೆ ಪ್ರತಿಭಟಿಸಿ, ಸಲಹೆಗಳನ್ನು ನೀಡಲಿ. ಇದಕ್ಕೆ ತಕರಾರು ಏನು ಇಲ್ಲ. ಆದರೆ ವರದಿ ಜಾರಿಯಾಗಬಾರದು ಎನ್ನುವುದು ಸರಿಯಲ್ಲ ಎಂದರು.

    ಮಲದ ಗುಂಡಿ ಸ್ವಚ್ಛತೆ:

    ಜನರನ್ನು ಮಲದ ಗುಂಡಿಗೆ ಇಳಿಸಿ, ಸ್ವಚ್ಛತೆ ಮಾಡಿಸುವುದನ್ನು ಈ ಹಿಂದೆ ದೇವರಾಜ ಅರಸು ಅವರ ಅವಧಿಯಲ್ಲಿ ಬವಸಲಿಂಗಪ್ಪನವರು ನಿಷೇಧಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವನಹಳ್ಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಛತೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡದ್ದು ಖಂಡನೀಯ. ಹಾಸ್ಟೆಲ್‌ನ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಬಿಜೆಪಿಯವರಿಗೆ ಎಂತಹ ವಿಚಾರಗಳ ಬಗ್ಗೆ ಪ್ರತಿಭಟನೆ ಮಾಡಬೇಕು ಎಂಬುದು ಅವರಿಗೆ ಅರಿವಿಲ್ಲ ಎಂದು ಕಾಣಿಸುತ್ತದೆ. ಇದರಲ್ಲಿ ಸರ್ಕಾರದ ಪಾತ್ರ ಏನಿದೆ ಎಂದು ಪ್ರಶ್ನಿಸುತ್ತೇನೆ ಎಂದರು.

    ದುರದೃಷ್ಟಕರ ಘಟನೆ ನಡೆಯಬಾರದ್ದಾಗಿತ್ತು. ಅಮಾನುಷ ಕೃತ್ಯವನ್ನು ಒಂದು ಊರಿನ ಕೆಲ ಜನ ಮಾಡಿದ್ದಾರೆ. ಇಂತಹದರಲ್ಲಿ ವಿಪಕ್ಷದವರು ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಘಟನೆ ತಡರಾತ್ರಿ ನಡೆದಿದ್ದು, ಊರಿನ ಜನ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತ್ಯ ಎಸಗಿದ ಏಳು ಜನರನ್ನು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯು ನಿನ್ನೆ ಪೊಲೀಸರು ಸ್ಥಳಕ್ಕೆ ಬಾರದಿದ್ದರೆ ಬೇರೆ ರೀತಿಯಲ್ಲಿ ತೊಂದರೆ ಆಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯು ಪೊಲೀಸರ ಕರ್ತವ್ಯಪ್ರಜ್ಞೆಯನ್ನು ಮೆಚ್ಚಿರುವುದನ್ನು ಸೂಚಿಸುತ್ತದೆ ಎಂದು ತಿಳಿಸಿದರು.
    ಘಟನೆಯ ಬಗ್ಗೆ ನನಗೆ ಗೊತ್ತಾದ ತಕ್ಷಣ ಬೆಂಗಳೂರಿನಿಂದ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆಗೆ ಧೈರ್ಯ ಹೇಳಿದ್ದೇನೆ. ತದನಂತರ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇನೆ. ಪರಿಸ್ಥಿತಿಯನ್ನು ಅರಿತ ದಿನವೇ ಸಂತ್ರಸ್ತೆಗೆ ಐದು ಲಕ್ಷ ರೂ. ಪರಿಹಾರ ಹಾಗೂ ಆರೋಗ್ಯ ವೆಚ್ಚ ಭರಿಸುವುದಾಗಿ ಸರ್ಕಾರ ಘೋಷಿಸಿದೆ.

    ಊರು ಬಿಟ್ಟು ಹೋಗಿದ್ದ ಯುವಕ-ಯುವತಿ ಬೆಳಗಾವಿ ಪೊಲೀಸ್ ಆಯುಕ್ತರ ಮುಂದೆ ಹಾಜರಾಗಿ ರಕ್ಷಣೆ ಕೋರಿದ್ದು ರಕ್ಷಣೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವಕ-ಯುವತಿಗೆ ಏನೆಲ್ಲ ರಕ್ಷಣೆ ಒದಗಿಸಬೇಕು ಎಂಬುದರ ಬಗ್ಗೆಯು ಚಿಂತನೆ ನಡೆಸಲಾಗಿದೆ. ಸಂತ್ರಸ್ತೆಗೆ ಪರಿಹಾರವಾಗಿ 2 ಎಕರೆ ಜಮೀನು ಮಂಜೂರು ಮಾಡಲು ಕ್ರಮ ವಹಿಸಲಾಗಿದೆ. ಇಷ್ಟೆಲ್ಲ ಕೆಲಸ ಮಾಡಿದ್ದಾಗಿಯೂ ಪ್ರಕರಣವನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಸರಿಯಲ್ಲ.
    ರಾಷ್ಟ್ರೀಯ ಮಹಿಳಾ ಆಯೋಗ, ಎಸ್‌ಟಿ ಕಮಿಷನ್ ಸಂತ್ರಸ್ತೆಗೆ ಸಹಾಯ ಮಾಡಬೇಕು. ಇನ್ನು ಹೆಚ್ಚಿನ ಸಹಾಯ ಮಾಡುವ ಸಲಹೆಗಳಿದ್ದರೆ ನೀಡಲಿ. ವಿನಾಕಾರಣ ದೂಷಿಸಬಾರದು ಎಂದು ಪರಮೇಶ್ವರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts