More

    ಗುಪ್ಕರ್ ಮೈತ್ರಿಯಲ್ಲಿ ನಾವಿಲ್ಲ – ಸ್ಪಷ್ಟೀಕರಣ ನೀಡಿದ ಕಾಂಗ್ರೆಸ್ ವಕ್ತಾರ ಸುರ್ಜೇವಾಲ

    ನವದೆಹಲಿ: ಗುಪ್ಕರ್ ಮೈತ್ರಿ ಅಥವಾ ಪೀಪಲ್ಸ್ ಅಸೋಸಿಯೇಷನ್​ ಫಾರ್ ಗುಪ್ಕರ್ ಡಿಕ್ಲರೇಷನ್​ (ಪಿಎಜಿಡಿ)ನಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯಲ್ಲೂ ಪಾಲುದಾರ ಪಕ್ಷವಲ್ಲ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.ಈ ಸಂಬಂಧ ಎರಡುಪುಟಗಳ ಹೇಳಿಕೆಯನ್ನು ಟ್ವೀಟ್ ಮೂಲಕ ಅಪ್ಡೇಟ್ ಮಾಡಿರುವ ಅವರು,ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸವಾಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಜಮ್ಮು-ಕಾಶ್ಮೀರ ಮತ್ತು ಲಡಾಕ್ ಗೆ ಸಂಬಂಧಿಸಿ ದಾರಿ ತಪ್ಪಿಸುವ ಹೇಳಿಕೆಗಳನ್ನು, ಸುಳ್ಳು ಹೇಳಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡುತ್ತಿದ್ದಾರೆ. ಏಳು ಪಕ್ಷಗಳ ಗುಪ್ಕರ್ ಅಲಯನ್ಸ್ ಅಥವಾ ಪಿಎಜಿಡಿಯಲ್ಲಿ ಕಾಂಗ್ರೆಸ್ ಯಾವುದೇ ರೀತಿಯಲ್ಲೂ ಪಾಲು ಹೊಂದಿಲ್ಲ.ಸುಳ್ಳುಗಳನ್ನು ಹರಡುವ ಮೂಲಕ ಮೋದಿ ಸರ್ಕಾರ ತಾನೇನೋ ಮೋಡಿ ಮಾಡುತ್ತಿದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ.ಜಮ್ಮು-ಕಾಶ್ಮೀರ ಮತ್ತು ಲಡಾಕ್​ ವಿಚಾರವಾಗಿ ದಾರಿತಪ್ಪಿಸುವ ತಪ್ಪು ಹೇಳಿಕೆ ನೀಡುತ್ತ, ರಾಷ್ಟ್ರೀಯ ಭದ್ರತೆಯ ಹೊಣೆಗಾರಿಕೆಯಿಂದ ಅಮಿತ್ ಷಾ ನುಣುಚಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.

    ಇದನ್ನೂ ಓದಿ: ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ- ಗುಪ್ಕರ್ ಮೈತ್ರಿ ದೇಶ ವಿರೋಧಿ, ಕಾಂಗ್ರೆಸ್​ಗೆ “ರಾಷ್ಟ್ರೀಯತೆ”ಯ ಸವಾಲು!

    ಇದಕ್ಕೂ ಮುನ್ನ, ಅಕ್ಟೋಬರ್ 15ರಂದು ರಚಿಸಲ್ಪಟ್ಟ ಪಿಎಜಿಡಿಯಲ್ಲಿ ಜಮ್ಮು-ಕಾಶ್ಮೀರದ ಏಳು ಪ್ರಮುಖ ಪಕ್ಷಗಳು ಜತೆಗೂಡಿದ್ದವು. ಪಿಎಜಿಡಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಈ ಮೈತ್ರಿಯ ಭಾಗವಾಗಿರಲಿದೆ ಎಂದು ಘೋಷಿಸಿದ್ದರು. ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಕಮಿಟಿ ಮುಖ್ಯ ವಕ್ತಾರ ರವೀಂದರ್ ಶರ್ಮಾ ಕೂಡ, ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಸೇರಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಕಳೆದ ವಾರ ಘೋಷಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆ ನವೆಂಬರ್ 28 ಮತ್ತು ಡಿಸೆಂಬರ್ 19ರ ನಡುವೆ ಎಂಟು ಹಂತಗಳಲ್ಲಿ ನಡೆಯಲಿದೆ. (ಏಜೆನ್ಸೀಸ್)

    ಸೋನಿಯಾ ಜಿ, ರಾಹುಲ್​ ಜೀ.. ನೀವು ಗುಪ್ಕರ್ ಗ್ಯಾಂಗ್​ ನ ಬೆನ್ನಿಗಿದ್ದೀರಾ? – ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts